ಕರ್ನಾಟಕ

karnataka

ETV Bharat / state

ನೆರೆಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ: ರೈತರಿಂದ ಮನವಿ ಸಲ್ಲಿಕೆ

ನೆರೆಹಾವಳಿಗೆ ತುತ್ತಾಗಿದ್ದ ಪ್ರದೇಶಗಳ ವೀಕ್ಷಣೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರಿಗೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗೊಂದಿ ಗ್ರಾಮದ ರೈತ ಮುಖಂಡರು ವಿವಿಧ ಬೇಡಿಕೆ ಈಡೇರಿಸುವಂತೆ ಸಿಎಂಗೆ ಮನವಿ ಸಲ್ಲಿಸಿದರು.

ಸಿಎಂಗೆ ಮನವಿ

By

Published : Aug 13, 2019, 11:20 PM IST

ಹಾವೇರಿ:ಜಿಲ್ಲೆಯಲ್ಲಿ ನೆರೆಯಿಂದ ತತ್ತರಿಸಿರುವ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ, ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಸಿಎಂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಸಂಚರಿಸಿದರು. ಈ ವೇಳೆ ಬಿಎಸ್​ವೈ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳನ್ನು ಪ್ರತ್ಯೇಕಿಸುವ ವರದಾ ನದಿ ಸೇತುವೆ ಮೇಲೆ ನಿಂತು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗೊಂದಿ ಗ್ರಾಮದ ರೈತ ಮುಖಂಡರು ವಿವಿಧ ಬೇಡಿಕೆ ಈಡೇರಿಸುವಂತೆ ಸಿಎಂಗೆ ಮನವಿ ಸಲ್ಲಿಸಿದರು.

ಸಿಎಂಗೆ ರೈತರಿಂದ ಮನವಿ ಸಲ್ಲಿಕೆ

ರೈತರ ಮೇಲೆ ಹಾಕಿರುವ ಕೇಸ್​​ ವಾಪಸ್​​ ಪಡೆಯುವುದು, ಬೆಳೆವಿಮೆ ವಿತರಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರಲಾಯಿತು. ಆಗ ತಕ್ಷಣವೇ ಅಧಿಕಾರಿಗಳನ್ನು ಕರೆದು ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದರು.

ABOUT THE AUTHOR

...view details