ರಾಣೆಬೆನ್ನೂರ:ಉಪ ಚುನಾವಣೆ ದಿನಾಂಕವನ್ನು ಮುಂದೂಡಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದಕ್ಕೆ ಅನರ್ಹ ಶಾಸಕ ಆರ್.ಶಂಕರ ಅಭಿಮಾನಿಗಳು ಪಟಾಕಿ ಸಿಡಿಸಿ ತೀರ್ಪನ್ನು ಸ್ವಾಗತಿಸಿದರು.
ಉಪ ಚುನಾವಣೆ ಮುಂದೂಡಿಕೆ.. ಅನರ್ಹ ಶಾಸಕ ಆರ್.ಶಂಕರ ಅಭಿಮಾನಿಗಳಿಂದ ಸಂಭ್ರಮ - ಚುನಾವಣೆ ಆಯೋಗ
ಹಾವೇರಿ ಜಿಲ್ಲೆ ರಾಣೆಬೆನ್ನೂರ ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ ಅಭಿಮಾನಿಗಳು ಉಪ ಚುನಾವಣೆ ಮುಂದೂಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅನರ್ಹ ಶಾಸಕ ಆರ್ ಶಂಕರ ಕಾರ್ಯಕರ್ತರ ಸಂಭ್ರಮ
ಚುನಾವಣೆ ಆಯೋಗ ಈಚೆಗೆ ಅನರ್ಹ ಶಾಸಕರಿಂದ ತೆರೆವಾದ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿತ್ತು. ಸುಪ್ರೀಂಕೋರ್ಟ್ ಅಂಗಳದಲ್ಲಿದ್ದ ಅನರ್ಹ ಶಾಸಕರ ವಿಚಾರಣೆಯನ್ನು ಮುಂದೂಡಿ, ಉಪಚುನಾವಣೆಗೆ ತಡೆ ನೀಡಿದ ಹಿನ್ನೆಲೆಯಲ್ಲಿ ರಾಣೆಬೆನ್ನೂರ ಅನರ್ಹ ಶಾಸಕ ಆರ್.ಶಂಕರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.