ಕರ್ನಾಟಕ

karnataka

By

Published : Feb 18, 2020, 10:52 PM IST

ETV Bharat / state

ರಾಣೆಬೆನ್ನೂರು ನಗರಸಭೆಯ ಕರ ಜಕಾತಿ ಟೆಂಡರ್​​ ಕೊನೆಗೂ ರದ್ದು

ರಾಣೆಬೆನ್ನೂರಿನಲ್ಲಿ ಜಕಾತಿ ವಸೂಲಿ ಟೆಂಡರ್​ನಲ್ಲಿ ಬೇಜವಾಬ್ದಾರಿ ತೋರಲಾಗಿದೆ. ನಗರದ ಹಲವು ಪ್ರದೇಶಗಳನ್ನು ಸೇರಿಸಿಲ್ಲವೆಂದು ಆರೋಪಿಸಿ ಟೆಂಡರ್​​ ರದ್ದುಗೊಳಿಸಲಾಯಿತು.

ಕೊನೆಗೂ ರದ್ದು
ಕೊನೆಗೂ ರದ್ದು

ರಾಣೆಬೆನ್ನೂರ: ಜಕಾತಿ ವಸೂಲಿ ಟೆಂಡರ್​ನಲ್ಲಿ ಬೇಜವಾಬ್ದಾರಿ ತೋರಲಾಗಿದೆ. ನಗರದ ಹಲವು ಪ್ರದೇಶಗಳನ್ನು ಸೇರಿಸಿಲ್ಲವೆಂದು ಆರೋಪಿಸಿ ಟೆಂಡರ್​​ ರದ್ದುಗೊಳಿಸಲಾಯಿತು.

ಒಂದು ವಾರದ ಹಿಂದೆ ನಗರಸಭಾ ಕಾರ್ಯಾಲಯದಿಂದ ನಗರದ ವಿವಿಧ ಭಾಗಗಳಲ್ಲಿ ಬೀದಿಬದಿ ವ್ಯಾಪರಸ್ಥರ ಕರ ವಸೂಲಿ ಮಾಡುವ ಟೆಂಡರ್ ಪ್ರಕಟಣೆ ಹೊರಡಿಸಲಾಯಿತು. ಈ ಹಿನ್ನೆಲೆಯಲ್ಲಿ ಇಂದು ಸುಮಾರು ಎಂಟು ಜನ ಟೆಂಡರ್​ದಾರರು 50 ಸಾವಿರ ರೂ. ಡಿಡಿ ತಗೆದುಕೊಂಡು ಟೆಂಡರ್​ಗೆ ಭಾಗವಹಿಸಿದ್ದರು. ಆದರೆ, ನಗರ ವಿಸ್ತೀರ್ಣ ಹೆಚ್ಚಾಗಿದೆ. ಇನ್ನೂ ಕೆಲ ಪ್ರದೇಶಗಳನ್ನು ಸೇರಿಸಿಲ್ಲ. ಈ ಹರಾಜು ಪ್ರಕ್ರಿಯೆ ಮುಂದೂಡಬೇಕು ಎಂದು ನಗರಸಭಾ ಸದಸ್ಯರು ಆಗ್ರಹಿಸಿದರು. ರಾಣೆಬೆನ್ನೂರು ನಗರದಲ್ಲಿ ದಿನನಿತ್ಯ ಸಂತೆ ಮೈದಾನದಲ್ಲಿ ಎಷ್ಟು ವಸೂಲಿ ಆಗುತ್ತದೆ ಎಂಬುದು ಅಧಿಕಾರಿಗಳಿಗೆ ‌ಮಾಹಿತಿ ಇಲ್ಲ. ಹಿಂದಿನ ಹರಾಜು ಪ್ರಕಟಣೆಯಂತೆ ತರಕಾರಿ ಮಾರುಕಟ್ಟೆ, ವಾರದ ಮಾರುಕಟ್ಟೆ, ದೊಡ್ಡಪೇಟೆ ಮಾತ್ರ ಕರ ವಸೂಲಿ ಜಾಗವೆಂದು ಗುರುತಿಸಲಾಗಿದೆ.

ರಾಣೆಬೆನ್ನೂರು ನಗರಸಭೆಯ ಜಕಾತಿ ಟೆಂಡರ್ ಸಭೆ

ಇನ್ನು ನಗರದ ಎಂಜಿ ರಸ್ತೆ, ಪಿಬಿ ರಸ್ತೆ, ಎಡಿಬಿ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಸ್ಥರು ಹೆಚ್ಚಾಗಿದ್ದಾರೆ. ಈ ರಸ್ತೆಗಳನ್ನು ನಗರಸಭೆ ಅಧಿಕಾರಿಗಳು ಕರ ವಸೂಲಾತಿಗೆ ಸೇರಿಸದೆ ಟೆಂಡರ್ ಕರೆಯಲಾಗಿದೆ. ಇದರಿಂದ ನಗರಸಭೆಗೆ ಲಕ್ಷಾಂತರ ರೂ. ಆದಾಯ ನಷ್ಟವಾಗುತ್ತದೆ. ಇದನ್ನು ಸರಿಪಡಿಸಿದ ನಂತರ ಹರಾಜು ಮಾಡಲು ಒಕ್ಕೂರಲಿನಿಂದ ಆಗ್ರಹಿಸಿದರು.

ABOUT THE AUTHOR

...view details