ರಾಣೆಬೆನ್ನೂರು(ಹಾವೇರಿ):ಸತತ ನಾಲ್ಕು ಬಾರಿ ಶಾಸಕರಾಗಿ, ವಿಧಾನಸಭಾ ಅಧ್ಯಕ್ಷರಾಗಿದ್ದ ಕೆ.ಬಿ.ಕೋಳಿವಾಡ ಅವರನ್ನು ಕೆಪಿಜೆಪಿ ಪಕ್ಷದ ಮೂಲಕ ಮಣಿಸಿದ ಆರ್.ಶಂಕರ ಸಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳ ನಡುವೆ ಆರ್. ಶಂಕರ ಒಂದು ಪಕ್ಷದ ಜತೆ ನೇರವಾಗಿ ಗುರುತಿಸಿಕೊಳ್ಳದೆ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆಗೆ ಸುಳಿದಾಡಿ ನಂತರ ಶಾಸಕ ಸ್ಥಾನದಿಂದಲೇ ಅನರ್ಹವಾದರು. ಸದ್ಯ ಕ್ಷೇತ್ರದಲ್ಲಿ ಶಾಸಕರು ಇಲ್ಲ, ಅಭಿವೃದ್ಧಿಯೆ ಮಾಯೆ ಎಂಬ ಅಡಿಯಲ್ಲಿ ಜನರು ಹಾಗೂ ಪಕ್ಷದ ಮುಖಂಡರು ಮಾತುಗಳು ಹೊರಳಾಡುತ್ತಿವೆ.
ಉಪಚುನಾವಣೆ ಕಾವು ಜೋರು; ಮುಂದೆ ಯಾರಾಗ್ತಾರೆ ರಾಣೆಬೆನ್ನೂರು ಶಾಸಕ? - KB Koliwad news
ಬೀಜದ ನಗರಿ ಕ್ಷೇತ್ರದ ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ ಆರ್.ಶಂಕರ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹವಾಗಿದ್ದು, ಸದ್ಯ ಕ್ಷೇತ್ರದಲ್ಲಿ ಮತ್ತೊಂದು ಉಪಚುನಾವಣೆ ಕಾವು ಜೋರಾಗಿದೆ. ಮುಂದೆ ಯಾರಾಗ್ತಾರೆ ರಾಣೆಬೆನ್ನೂರು ಶಾಸಕ ಎಂಬ ಪ್ರಶ್ನೆ ಜನರಲ್ಲಿ ಮೂಡತ್ತಿದೆ.
ಕೋಳಿವಾಡರ 'ಕೈ'ಯಾಟ...
ಆರ್.ಶಂಕರ ಅವರು ಕ್ಷೇತ್ರದ ಪಕ್ಷೇತರ ಶಾಸಕರಾದ ನಂತರ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತು ಜೋರಾಗಿತ್ತು. ಇದರ ನಡುವೆ ಶಂಕರ ಎರಡನೇ ಬಾರಿ ಸಚಿವ ಸಂಪುಟ ಸೇರುವಾಗ ಕಾಂಗ್ರೆಸ್ ಜತೆ ವಿಲೀನಗೊಂಡಿದ್ದರು. ಇದ್ದರಿಂದ ರಾಣೆಬೆನ್ನೂರ ಕ್ಷೇತ್ರದಲ್ಲಿ ಕೋಳಿವಾಡ ಕಾಂಗ್ರೆಸ್ ನಂಟು ಮುಗಿತು ಎಂಬ ಮಾತು ಜೋರಾಗಿತ್ತು. ಆದರೆ ದಿಢೀರ್ ಬದಲಾವಣೆಯಲ್ಲಿ ಮತ್ತೆ ಕೋಳಿವಾಡರು ‘ಕೈ’ ನಂದೇ ಎಂಬುದನ್ನು ತೋರಿಸಿ ಬಿಟ್ಟರು.
ಉಪಚುನಾವಣೆ ಗುಂಗಿನಲ್ಲಿ ಜನತೆ...
ರಾಣೆಬೆನ್ನೂರ ಕ್ಷೇತ್ರದಲ್ಲಿ ಒಟ್ಟು 2ಲಕ್ಷ ಅಧಿಕ ಮತದಾರರು ಇದ್ದು, ಮತ್ತೊಂದು ಉಪಚುನಾವಣೆಯ ನಿರೀಕ್ಷೆಯಲ್ಲಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ವ್ಯಕ್ತಿ ಬದಲಾಯಿಸಿದ ಮತದಾರ, ಈ ಬಾರಿ ಉಪಚುನಾವಣೆ ನಡೆದರೆ ಯಾರಿಗೆ ಮಣೆ ಹಾಕುತ್ತಾರೆ ಎಂಬದು ಕೌತುಕವಾಗಿದೆ. ಕ್ಷೇತ್ರದಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನವೇ ರಾಜಕೀಯ ಚಟುವಟಿಕೆಗಳು ಜೋರಾಗಿವೆ.