ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಸಡಿಲಿಕೆ: ಹಾವೇರಿಯಲ್ಲಿ ವ್ಯಾಪಾರ-ವಹಿವಾಟು, ವಾಹನ ಸಂಚಾರ ಜೋರು - ಹಾವೇರಿ ಜಿಲ್ಲೆಯಲ್ಲಿ ಲಾಕ್​ಡೌನ್​ ಸಡಿಲಿಕೆ

ಲಾಕ್​ಡೌನ್​ ಸಡಿಲಿಕೆಯಾದ ಬಳಿಕ ಹಾವೇರಿ ನಗರದಲ್ಲಿ ಸರ್ಕಾರಿ ಬಸ್ ಸಂಚಾರ, ಆಟೋ ರಿಕ್ಷಾ ಮತ್ತು ಖಾಸಗಿ ವಾಹನಗಳ ಓಡಾಟ ಜೋರಾಗಿದೆ.

sddd
ಲಾಕ್​ಡೌನ್​ ಸಡಿಲಿಕೆ: ಹಾವೇರಿಯಲ್ಲಿ ವ್ಯಾಪಾರ-ವಹಿವಾಟು,ವಾಹನ ಸಂಚಾರ ಜೋರು!

By

Published : Apr 25, 2020, 12:44 PM IST

ಹಾವೇರಿ: ಏಲಕ್ಕಿ ನಾಡು, ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ಲಾಕ್​ಡೌನ್ ನಿಯಮಾವಳಿ ಸಡಿಲಿಕೆಯಾದ ನಂತರ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ.

ಲಾಕ್​ಡೌನ್​ ಸಡಿಲಿಕೆ: ಹಾವೇರಿಯಲ್ಲಿ ವ್ಯಾಪಾರ-ವಹಿವಾಟು, ವಾಹನ ಸಂಚಾರ ಜೋರು!

ಲಾಕ್​ಡೌನ್ ಆರಂಭದಿಂದಲೂ ನಗರದಲ್ಲಿ ಬೈಕ್ ಮತ್ತು ಕಾರುಗಳ ಓಡಾಟ ತುಂಬಾ ವಿರಳವಾಗಿತ್ತು. ಈಗ ಲಾಕ್​ಡೌನ್ ನಿಯಮಗಳಲ್ಲಿ ಸಡಿಲಿಕೆಯಾದ ನಂತರ ಕಾರು ಮತ್ತು ಬೈಕ್​ಗಳ ಓಡಾಟ ಹೆಚ್ಚಳವಾಗಿದೆ. ದಿನಸಿ ಅಂಗಡಿಗಳು, ಆಟೋಮೊಬೈಲ್ಸ್, ಎಲೆಕ್ಟ್ರಿಕಲ್ಸ್ ಸೇರಿದಂತೆ ಬಹುತೇಕ ಅಂಗಡಿಗಳು ಒಂದೊಂದಾಗಿ ಓಪನ್ ಆಗುತ್ತಿವೆ. ಸರ್ಕಾರಿ ಬಸ್ ಸಂಚಾರ, ಆಟೋ ರಿಕ್ಷಾ ಮತ್ತು ಖಾಸಗಿ ವಾಹನಗಳ ಓಡಾಟ ಜೋರಾಗಿದೆ.

ಆದರೆ ಬೈಕ್​ನಲ್ಲಿ ಒಬ್ಬರಿಗೆ ಮಾತ್ರ ಓಡಾಡಲು ಅವಕಾಶ ಮಾಡಿ ಕೊಡಲಾಗಿದೆ. ಅಲ್ಲದೆ ದಿನಸಿ ಅಂಗಡಿ ಸೇರಿದಂತೆ ಬಹುತೇಕ ಅಂಗಡಿಗಳ ಮುಂದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ಮಾಡಲಾಗುತ್ತಿದೆ. ನಗರ ಪ್ರವೇಶಿಸುವ ವಾಹನಗಳನ್ನು ತಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ರೂಲ್ಸ್ ಬ್ರೇಕ್ ಮಾಡಿ ಸುತ್ತಾಡುತ್ತಿರುವವರಿಗೆ ದಂಡ ಹಾಕಿ ಬಿಸಿ ಮುಟ್ಟಿಸುತ್ತಿದ್ದಾರೆ. ಆದ್ರೆ ಲಾಕ್​ಡೌನ್ ನಿಯಮಾವಳಿ ಸಡಿಲಿಕೆ ಬಗ್ಗೆ ಇನ್ನೂ ಜಿಲ್ಲಾಡಳಿತ ಮಾಹಿತಿ ನೀಡಿಲ್ಲ.

ABOUT THE AUTHOR

...view details