ಹಾವೇರಿ: ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರಕ್ಕೆ ಅಡೆತಡೆ ಉಂಟಾಗಿದ್ದು, ಅಂಗಡಿಗಳ ಬಾಡಿಗೆ ಮನ್ನಾ ಮಾಡುವಂತೆ ಬಸ್ ನಿಲ್ದಾಣದ ವರ್ತಕರು ಪ್ರತಿಭಟನೆ ನಡೆಸಿದ್ದಾರೆ.
ಅಂಗಡಿ ಬಾಡಿಗೆ ಮನ್ನಾ ಮಾಡಲು ಆಗ್ರಹಿಸಿ ಹಾವೇರಿಯಲ್ಲಿ ವರ್ತಕರ ಪ್ರತಿಭಟನೆ
ಕೋವಿಡ್ನಿಂದಾಗಿ ವ್ಯಾಪಾರಕ್ಕೆ ಅಡೆತಡೆ ಉಂಟಾಗಿದ್ದು, ಅಂಗಡಿಗಳ ಬಾಡಿಗೆ ಮನ್ನಾ ಮಾಡುವಂತೆ ಹಾವೇರಿ ಬಸ್ ನಿಲ್ದಾಣದ ವರ್ತಕರು ಪ್ರತಿಭಟನೆ ನಡೆಸಿದ್ದಾರೆ.
ಕೋವಿಡ್ನಿಂದಾಗಿ ಮಾರ್ಚ್ ತಿಂಗಳಿನಿಂದ ವ್ಯಾಪಾರ ಕುಸಿದಿದೆ. ಬಾಡಿಗೆ ದುಪ್ಪಟ್ಟು ಕೇಳುತ್ತಾರೆ. ನಮಗೆ ಜೀವನ ನಡೆಸುವುದೇ ಕಷ್ಟವಾಗಿದ್ದು, ಅಂಗಡಿ ಬಾಡಿಗೆ ಮನ್ನಾ ಮಾಡಬೇಕು ಎಂದು ವರ್ತಕರು ಆಗ್ರಹಿಸಿದ್ದಾರೆ. ಎಲ್ಲಾ ಅಂಗಡಿಗಳ ಮುಂದೆ ಭಿತ್ತಿಪತ್ರ ಅಂಟಿಸಿದ ವರ್ತಕರು, ಬಾಡಿಗೆ ಮನ್ನಾ ಆಗುವವರೆಗೂ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ ನಾವು ಅಂಗಡಿ ತೆರೆದಿದ್ದೆವು. ಆದರೆ ಸಾರಿಗೆ ಅಧಿಕಾರಿಗಳು ಬಾಡಿಗೆ ಕಟ್ಟುವಂತೆ ಪೀಡಿಸುತ್ತಿದ್ದಾರೆ. ಕೊರೊನಾದಿಂದ ವ್ಯಾಪಾರ ಇಳಿಕೆಯಾಗಿದ್ದು, ವಹಿವಾಟು ಸುಧಾರಿಸುವವರೆಗೆ ತಮ್ಮ ಮಳಿಗೆಗಳ ಬಾಡಿಗೆ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.