ಕರ್ನಾಟಕ

karnataka

ETV Bharat / state

ಹಾವೇರಿ ಬಳಿ ಭೀಕರ ಅಪಘಾತ... ಮೂವರ ದುರ್ಮರಣ, 16 ಜನರಿಗೆ ಗಾಯ - ಪೊಲೀಸರು ಭೇಟಿ ನೀಡಿ

ಹಾವೇರಿ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ- ಮಿನಿ ಬಸ್​ಗೆ ಲಾರಿ ಡಿಕ್ಕಿ ಹೊಡೆದು ಮೂವರ ದುರ್ಮರಣ- 16 ಜನರಿಗೆ ಗಂಭೀರ ಗಾಯ

ಮಿನಿಬಸ್ ಗೆ ಲಾರಿ ಡಿಕ್ಕಿ

By

Published : Mar 28, 2019, 8:16 AM IST

ಹಾವೇರಿ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ.ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಮಿನಿ ಬಸ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 16 ಮಂದಿ ಗಾಯಗೊಂಡಿದ್ದಾರೆ.


ರಬ್ಬಾನಿ, ಶಬ್ಬೀರ್​ ಮತ್ತು ಖಾದರ್​ ಎಂಬುವರು ಮೃತರು. ಜಿಲ್ಲೆಯ ಹಿರೇಕೆರೂರಿನಿಂದ ಸವಣೂರಿನತ್ತ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದ್ದು, ಗಾಯಾಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಿನಿಬಸ್ ಗೆ ಲಾರಿ ಡಿಕ್ಕಿ

ಸ್ಥಳಕ್ಕೆ ಎಸ್ಪಿ ಪರಶುರಾಮ ಮತ್ತು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details