ಹಾವೇರಿ : ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕ್ಗೆ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದ ನವನಗರ ಬಡಾವಣೆಯಲ್ಲಿ ನಡೆದಿದೆ. ಚರಣ್ ವಿಭೂತಿ ಮೃತ ಬಾಲಕ.
ಶುಕ್ರವಾರ ಮನೆ ಸಮೀಪ ಆಟವಾಡುತ್ತಿದ್ದ ಬಾಲಕ ತೆರೆದ ನೀರಿನ ಟ್ಯಾಂಕ್ಗೆ ಬಿದ್ದಿದ್ದಾನೆ. ಬಾಲಕ ಬಿದ್ದಿರುವುದನ್ನು ಯಾರೂ ಗಮನಿಸದ ಕಾರಣ ಅಲ್ಲೇ ಕೊನೆಯುಸಿರೆಳೆದಿದ್ದಾನೆ.