ಕರ್ನಾಟಕ

karnataka

ETV Bharat / state

ತುಂಬಿದ ತುಂಗಭದ್ರಾ ನದಿ; ಹೊಲ ಗದ್ದೆಗಳಿಗೆ ನುಗ್ಗಿದ ನೀರು....

ರಾಣೆಬೆನ್ನೂರು ತಾಲೂಕಿನ ಮಾಕನೂರ ಗ್ರಾಮದಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ರೈತ ಶರಣಪ್ಪ ಹಲಗೇರಿ ಎಂಬುವರಿಗೆ ಸೇರಿದ ಎರಡು ಎಕರೆ ಬಾಳೆ ತೋಟದಲ್ಲಿ ಸಂಪೂರ್ಣವಾಗಿ ನೀರು ನಿಂತಿದೆ.

ranebennuru
ಬಾಳೆತೋಟ

By

Published : Aug 8, 2020, 11:18 PM IST

ರಾಣೆಬೆನ್ನೂರು:ತಾಲೂಕಿನ ಜೀವನದಿ ಎಂದು ಹೆಸರಾಗಿರುವ ತುಂಗಭದ್ರಾ ನದಿಯ ಒಳ ಹರಿವು ಹೆಚ್ಚಾಗಿದ್ದು, ನೀರು ರೈತರ ಹೊಲಗಳಿಗೆ ನುಗ್ಗುತ್ತಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ರಾಣೆಬೆನ್ನೂರು ತಾಲೂಕಿನ ಮಾಕನೂರ ಗ್ರಾಮದಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ರೈತ ಶರಣಪ್ಪ ಹಲಗೇರಿ ಎಂಬುವರಿಗೆ ಸೇರಿದ ಎರಡು ಎಕರೆ ಬಾಳೆ ತೋಟದಲ್ಲಿ ಸಂಪೂರ್ಣವಾಗಿ ನದಿ ನೀರು ನಿಂತಿದೆ. ಇದರಿಂದ ಬೆಳೆದು ನಿಂತ ಬಾಳೆತೋಟಕ್ಕೆ ಶೀತ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಬಾಳೆ ತೋಟದಲ್ಲಿ ಸಂಪೂರ್ಣವಾಗಿ ನದಿ ನೀರು ನಿಂತಿದೆ.

ತಾಲೂಕಿನ ನದಿ ತೀರದ ಗ್ರಾಮಗಳಾದ ಮಾಕನೂರ, ಹೊಳೆ ಆನ್ವೇರಿ, ಮುದೇನೂರು ಗ್ರಾಮದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಸದ್ಯ ತುಂಗಭದ್ರಾ ನದಿ ಒಳ ಹರಿವು ಹೆಚ್ಚಾಗಿದ್ದು, ಈಗಾಗಲೇ ಸುಮಾರು 50 ಎಕರೆಯ ಕಬ್ಬು, ಭತ್ತದ ಗದ್ದೆಗಳಲ್ಲಿ ನೀರು ನುಗ್ಗುತ್ತಿದೆ.

ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಾಗುತ್ತಿರುವ ಹಿನ್ನೆಲೆ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ನದಿ ಪಾತ್ರದ ಜನರಿಗೆ ತಮ್ಮ ಅಗತ್ಯ ವಸ್ತುಗಳನ್ನು, ಜಾನುವಾರುಗಳನ್ನು ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ಹೋಗಲು ಸೂಚನೆ ನೀಡಿದೆ.

ABOUT THE AUTHOR

...view details