ಹಾವೇರಿ: ಹಣ ಎಂಥವರನ್ನಾದ್ರೂ ಹೇಗ್ಹೇಗೋ ಮಾಡುತ್ತೆ ಅನ್ನೋದಕ್ಕೆ ಶಿಗ್ಗಾವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ. ಇದೇ ಊರಿನ ಜಮೀನಲ್ ಅಹ್ಮದ್ ಪಟೇಲ್ ಮತ್ತು ಶಿಗ್ಗಾವಿಯ ನಿಮ್ತಿಯಾಜ್ ಅಹ್ಮದ್ ಇಬ್ಬರು ಕೂಡ ಕುಚಿಕು ಗೆಳೆಯರು.
ಒಣ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದ ಜಮೀನಲ್ ಅಹ್ಮದ್ ಎಲ್ಲ ಗುಟ್ಟುಗಳನ್ನು ನಿಮ್ತಿಯಾಜ್ಗೆ ಹೇಳುತ್ತಿದ್ದ. ಅಲ್ಲದೆ ಹುಬ್ಬಳ್ಳಿಗೆ ಹೋಗಬೇಕಾದರೆ ತನ್ನ ದ್ವಿಚಕ್ರ ವಾಹನವನ್ನ ಇಮ್ತಿಯಾಜ್ನ ಮನೆಯಲ್ಲಿಟ್ಟು ಹೋಗುತ್ತಿದ್ದ. ಇದೇ ರೀತಿ ಹುಬ್ಬಳ್ಳಿಗೆ ಮೆಣಸಿನಕಾಯಿ ಮಾರಲು ಹೋಗಿದ್ದ ಜಮೀನಲ್ 7.50 ಲಕ್ಷ ರೂ. ನಗದು ತೆಗೆದುಕೊಂಡು ಬಂಕಾಪುರಕ್ಕೆ ಮರಳುತ್ತಿದ್ದ ವೇಳೆ ಅನಾಹುತವೊಂದು ನಡೆದಿತ್ತು.