ಹಾವೇರಿ: ಜಿಲ್ಲೆಯಲ್ಲಿ ಮುಂಬೈನಿಂದ ಬಂದ 24 ವರ್ಷದ ಯುವತಿಯೊಬ್ಬಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಹಾವೇರಿಯಲ್ಲಿ ಮತ್ತೊಂದು ಕೊರೊನಾ: ಸೋಂಕಿತರ ಸಂಖ್ಯೆ 16ಕ್ಕೆ - ಕೊರೊನಾ
ಮುಂಬೈನ ಅಂಧೇರಿಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಮೇ 19ರಂದು ತಂದೆ, ತಾಯಿಯೊಂದಿಗೆ ಶಿಗ್ಗಾಂವಿ ಪಟ್ಟಣಕ್ಕೆ ಆಗಮಿಸಿದ್ದರು. ನಿನ್ನೆ ಯುವತಿಯ ತಂದೆಯಲ್ಲಿ ಸೋಂಕು ದೃಢಪಟ್ಟಿತ್ತು.
ಮುಂಬೈನ ಅಂಧೇರಿಯಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಯುವತಿ ಮೇ 19ರಂದು ತಂದೆ, ತಾಯಿಯೊಂದಿಗೆ ಶಿಗ್ಗಾಂವಿ ಪಟ್ಟಣಕ್ಕೆ ಆಗಮಿಸಿದ್ದರು. ನಿನ್ನೆ ಯುವತಿಯ ತಂದೆಯಲ್ಲಿ ಸೋಂಕು ದೃಢಪಟ್ಟಿತ್ತು.
ಮೂಲತಃ ಶಿಗ್ಗಾಂವಿ ಪಟ್ಟಣದ ನಿವಾಸಿ ಆಗಿರುವ ರೋಗಿ ಸಂಖ್ಯೆ 3730ರಲ್ಲಿ ಸೋಂಕು ದೃಢಪಟ್ಟಿದೆ. ಶಿಗ್ಗಾಂವಿಯ ಜಕ್ಕಿನಕಟ್ಟಿ ಗ್ರಾಮದ ಬಳಿ ಇರುವ ರಾಣಿ ಚೆನ್ನಮ್ಮ ಸರಕಾರಿ ವಸತಿ ಶಾಲೆಯಲ್ಲಿ ಯುವತಿ ಕ್ವಾರಂಟೈನ್ ಆಗಿದ್ದರು. ಮೇ 24ರಂದು ಆರೋಗ್ಯ ಇಲಾಖೆಯು ಯುವತಿಯ ಗಂಟಲು ದ್ರವವನ್ನು ಲ್ಯಾಬ್ಗೆ ಕಳಿಸಿತ್ತು. ಈ ಪ್ರಕರಣ ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾಹಿತಿ ನೀಡಿದ್ದಾರೆ.