ಕರ್ನಾಟಕ

karnataka

ETV Bharat / state

ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಓರ್ವ ಬಲಿ

ಇಂದು ಕೋಡ ಗ್ರಾಮದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಈ ದುರ್ಘಟನೆ ನಡೆದಿದೆ.

ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ, A man Died from bull attack at Haveri
ಹಾವೇರಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ

By

Published : Jan 17, 2020, 7:27 PM IST

ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ವ್ಯಕ್ತಿಯ ಮೇಲೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದಲ್ಲಿ ಜರುಗಿದೆ.

ಶಿವಪ್ಪ ಮಲ್ಲೂರ (34) ಮೃತಪಟ್ಟ ವ್ಯಕ್ತಿ. ಸಂಕ್ರಾಂತಿ ಹಿನ್ನೆಲೆಯಲ್ಲಿ ಇಂದು ಕೋಡ ಗ್ರಾಮದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಈ ದುರ್ಘಟನೆ ನಡೆದಿದೆ.

ಸ್ಪರ್ಧೆಯ ಕಮಿಟಿಯಲ್ಲಿದ್ದ ಶಿವಪ್ಪ, ನೆರೆದಿದ್ದ ಜನರನ್ನು ಹಿಂದಕ್ಕೆ ಸರಿಸುವ ವೇಳೆ ಹೋರಿ ಬಂದು ಗುದ್ದಿದೆ. ಹೋರಿ ಶಿವಪ್ಪನ ಎದೆಗೆ ಗುದ್ದಿದ ಪರಿಣಾಮ ಶಿವಪ್ಪ ಸಾವನ್ನಪ್ಪಿದ್ದಾನೆ. ಮೃತದೇಹವನ್ನ ಹಿರೇಕೆರೂರು ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ.

ABOUT THE AUTHOR

...view details