ಕರ್ನಾಟಕ

karnataka

ETV Bharat / state

156 ಜನರಿಗೆ ಕೊರೊನಾ ಸೋಂಕು ದೃಢ: ಮೂವರ ಸಾವು - corona virus in haveri

ಹಾವೇರಿ ಜಿಲ್ಲೆಯಲ್ಲಿ 156 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಿದೆ.

156 positive corona cases in haveri
ಕೊರೊನಾ ಸೋಂಕು ದೃಢ

By

Published : Sep 2, 2020, 7:39 PM IST

ಹಾವೇರಿ: ಜಿಲ್ಲೆಯಲ್ಲಿ ಬುಧವಾರ 156 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 4635ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಡಳಿತ ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

ಕೊರೊನಾ ಸೋಂಕು ದೃಢ

ಇನ್ನೂ 69 ಜನರು ಗುಣಮುಖರಾಗಿದ್ದು, ಮನೆಗೆ ಮರಳಿದ್ದಾರೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.

ಬ್ಯಾಡಗಿ ತಾಲೂಕು 23, ಹಾನಗಲ್ ತಾಲೂಕು 9, ಹಾವೇರಿ ತಾಲೂಕು 55, ಹಿರೇಕೆರೂರು ತಾಲೂಕು 21 ಪ್ರಕರಣಗಳು ವರದಿಯಾಗಿವೆ. ರಾಣೆಬೆನ್ನೂರು ತಾಲೂಕು 29, ಸವಣೂರು ತಾಲೂಕು 3, ಶಿಗ್ಗಾವಿ ತಾಲೂಕು 14 ಹಾಗೂ ಇತರ ಜಿಲ್ಲೆಯ ಇಬ್ಬರಿಗೆ ಕೊರೊನಾ ತಗುಲಿದೆ.

ಜಿಲ್ಲೆಯಲ್ಲಿ ಸಾವಿರ ಜನ ಹೋಂ ಐಸೋಲೇಷನಲ್ಲಿದ್ದು, 361 ಜನ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details