ಬೆಂಗಳೂರು: ರಾಜ್ಯದಲ್ಲಿ ಕೊರೊನಾ-ಲಾಕ್ಡೌನ್ನಿಂದ ನಾಲ್ಕು ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಯಲ್ಲಿವೆ. ತನ್ನದೇ ಸಿಬ್ಬಂದಿಗೆ ವೇತನವನ್ನೂ ಕೊಡಲು ಆಗದ ಪರಿಸ್ಥಿತಿಗೆ ತಲುಪಿವೆ. ಬಳಿಕ ಸಹಾಯಕ್ಕಾಗಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ವಿಶೇಷ ಅನುದಾನ ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ, ನಾಲ್ಕು ನಿಗಮಗಳ ಸಾರಿಗೆ ನೌಕರರಿಗೆ ಜೂನ್ ತಿಂಗಳ ವೇತನಕ್ಕಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. 16,250 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿ ಕೆಲ ಷರತ್ತುಗಳೊಂದಿಗೆ ಆದೇಶ ಹೊರಡಿಸಿದೆ.
ಸಾರಿಗೆ ನಿಗಮಗಳ ಕಷ್ಟಕ್ಕೆ ಧಾವಿಸಿರುವ ಸರ್ಕಾರ, ಏಪ್ರಿಲ್, ಮೇ ತಿಂಗಳು ಹಾಗೂ ಜೂನ್ ಅರ್ಧ ತಿಂಗಳ ವೇತನಕ್ಕಾಗಿ ಹಣ ಬಿಡುಗಡೆ ಮಾಡಿದೆ. ಕೆಎಸ್ಆರ್ಟಿಸಿಗೆ 10,176 ಲಕ್ಷ, ಬಿಎಂಟಿಸಿಗೆ 9,862 ಲಕ್ಷ, ವಾಯವ್ಯ ಸಾರಿಗೆ ಸಂಸ್ಥೆಗೆ 6,642 ಲಕ್ಷ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 5,820 ಲಕ್ಷ ಬಿಡುಗಡೆ ಮಾಡಿದೆ. ಒಟ್ಟಾರೆ ನಾಲ್ಕೂ ನಿಗಮಕ್ಕೆ 32,500 ಲಕ್ಷ ( 325 ಕೋಟಿ) ಏಪ್ರಿಲ್, ಮೇ, ಜೂನ್ ಅರ್ಧ ತಿಂಗಳ ವೇತನ ಬಿಡುಗಡೆ ಮಾಡಿದೆ.
ಹಾಗೆಯೇ, ಜೂನ್ ತಿಂಗಳ ಅರ್ಧದಷ್ಟು ಸಂಬಳಕ್ಕಾಗಿ 1,62,50,00 ಲಕ್ಷ ಬಿಡುಗಡೆ ಮಾಡಿದೆ. ಜೂನ್ ತಿಂಗಳ ವೇತನಕ್ಕಾಗಿ 325 ಕೋಟಿ ಹಣಕ್ಕೆ ಬೇಡಿಕೆಯನ್ನು ನಿಗಮಗಳು ಇಟ್ಟಿದ್ದವು. ಸದ್ಯ ಕೋವಿಡ್ ಹಿನ್ನೆಲೆ ಆರ್ಥಿಕ ಸಂಕಷ್ಟ ನೆಪವೊಡ್ಡಿ 162 ಕೋಟಿ 50 ಲಕ್ಷ ಮಾತ್ರ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಸಿಬ್ಬಂದಿಯ ವೇತನವನ್ನು ಮಾತ್ರ ನೀಡಬೇಕು, ಇತರೆ ಆರ್ಥಿಕ ಸೌಲಭ್ಯ ಹಾಗೂ ಭತ್ಯೆಗಳನ್ನ ನೀಡಕೂಡದು ಎಂದು ಆದೇಶಿಸಿದೆ.
ಇನ್ನು, ಸಂಸ್ಥೆಗಳು ಸಿಬ್ಬಂದಿಯವರಿಗೆ ವೇತನವನ್ನು ಹೊರತುಪಡಿಸಿ, ಒದಗಿಸುವ ಇತರೆ ಭತ್ಯೆ ಮತ್ತು ಆರ್ಥಿಕ ಸೌಲಭ್ಯಕ್ಕೂ ಕತ್ತರಿ ಹಾಕಿದೆ. "Over Time/BATA"/ಭತ್ಯೆಯು ಒಳಗೊಂಡಂತೆ ಪಾವತಿಸುವಂತಿಲ್ಲ ಅಂತಾ ಸೂಚಿಸಿದೆ. ಈ ಮೂಲಕ ಸಿಬ್ಬಂದಿ ಓವರ್ ಟೈಂ ಡ್ಯೂಟಿ ಮಾಡಿದರೂ ಸ್ಯಾಲರಿ ಅಷ್ಟೇ ಕ್ರೆಡಿಟ್ ಆಗಲಿದೆ. ಈ ಮೂಲಕ ಸಿಹಿ ಸುದ್ದಿ ಕೊಟ್ಟು ಕಹಿ ತಿನ್ನುವ ಅನುಭವ ಆಗಿದೆ.
ವೇತನ ಬಳಕೆಗೆ ಷರತ್ತುಗಳೇನು?
1) ನಾಲ್ಕೂ ಸಾರಿಗೆ ಸಂಸ್ಥೆಗಳು ಆರ್ಥಿಕ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.