ಹೆಚ್ಡಿಕೆ-ಬಿಜೆಪಿ ಚೆನ್ನಾಗ್ ಇರೋದ್ರಿಂದ ಬೈ ಎಲೆಕ್ಷನ್ನಲ್ಲಿ ಬಿಜೆಪಿ ಗೆದ್ದಿದ್ದು: ಸಿದ್ದರಾಮಯ್ಯ
ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಮೊದಲಿಂದಲೂ ಬಿಜೆಪಿ ಜೊತೆ ಚೆನ್ನಾಗಿದ್ದಾರೆ. ಹಾಗಾಗಿಯೇ ಶಿರಾ ಮತ್ತು ಆರ್.ಆರ್. ನಗರದಲ್ಲಿ ಜೆಡಿಎಸ್ನ ವೋಟು ಬಿಜೆಪಿಗೆ ಹೋಗಿದ್ದು, ಇಲ್ಲದಿದ್ರೆ ಬಿಜೆಪಿ ಗೆಲ್ಲೋಕೆ ಆಗ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ
ಹಾಸನ:ಕುಮಾರಸ್ವಾಮಿ ಮೊದಲಿಂದಲೂ ಬಿಜೆಪಿ ಜೊತೆ ಚೆನ್ನಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಸಂಬಂಧ ಗಟ್ಟಿಯಾಗಿರುವುದರಿಂದ ಶಿರಾ ಮತ್ತು ಆರ್. ಆರ್. ನಗರದಲ್ಲಿ ಜೆಡಿಎಸ್ನ ವೋಟು ಬಿಜೆಪಿಗೆ ಹೋಗಿದ್ದು, ಇಲ್ಲ ಅಂದಿದ್ದರೆ ಬಿಜೆಪಿ ಗೆಲ್ಲುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಚ್ಡಿಕೆ ಕಾಲೆಳೆದಿದ್ದಾರೆ.
ಹೈಕಮಾಂಡ್ ಆದೇಶ ಮಾಡಿದ್ದಕ್ಕೆ ಅವರ ಜೊತೆ ಸರ್ಕಾರ ಮಾಡಿದ್ದು, ಇಲ್ಲದಿದ್ದರೆ ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ. ಮಸ್ಕಿ ಚುನಾವಣೆಯಲ್ಲಿ ನಿಂತವರೆಲ್ಲ ಕಾಂಗ್ರೆಸ್ಸಿನಲ್ಲಿ ಇದ್ದವರು ಅಲ್ವೇ?. ಈ ಯಡಿಯೂರಪ್ಪನ ಮಗ ಇದ್ದಾನಲ್ಲ ವಿಜಯೇಂದ್ರ ಹಣ ಖರ್ಚು ಮಾಡೋದ್ರಲ್ಲಿ ಸ್ಟ್ಯಾಟಿಸ್ಟಿಕ್ಸ್ ಮಾಡಿದ್ದಾರೆ. ಹಾಗೆ ಮಾಡಿದ್ರೆ ಉಪಚುನಾವಣೆ ಬಹುತೇಕ ಸರ್ಕಾರದ ಪರವೇ ಗೆಲುವು ಸಾಧಿಸುತ್ತದೆ. ಇದು ಸರ್ವೇ ಸಾಮಾನ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.