ಕರ್ನಾಟಕ

karnataka

ETV Bharat / state

ಕೋವಿಡ್ ಕೇರ್ ಸೆಂಟರ್​ಗೆ 200ಕ್ಕೂ ಅಧಿಕ ಕೊಠಡಿ ಬಿಟ್ಟುಕೊಟ್ಟ ಶ್ರವಣಬೆಳಗೊಳದ ಜೈನ ಮಠ

ಹಾಸನ ಜಿಲ್ಲಾಡಳಿತದ ಕೋವಿಡ್ ಕೇರ್​ ಸೆಂಟರ್​ಗೆ ಶ್ರವಣಬೆಳಗೊಳದ ಜೈನ ಮಠದಿಂದ ಕಟ್ಟಡ ಬಿಟ್ಟು ಕೊಡುವ ಮೂಲಕ ಸಹಕಾರ ನೀಡಲಾಗಿದೆ.

Shravanabelagola Jain Math
ಕೋವಿಡ್ ಸೆಂಟರ್​ ಬಳಿಯಿಂದ ನಮ್ಮ ಪ್ರತಿನಿಧಿ ನೀಡಿದ ಮಾಹಿತಿ

By

Published : Jun 12, 2021, 1:37 PM IST

ಹಾಸನ: ಜಿಲ್ಲೆಯಲ್ಲಿ ಕೋವಿಡ್​ ಸೋಂಕಿತರು ಹೆಚ್ಚಾಗಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಹೋಮ್​​ ಐಸೋಲೇಷನ್​​ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್​ಗಳಿಗೆ ದಾಖಲಿಸಲು ಜಿಲ್ಲಾಡಳಿತ ಮುಂದಾಗಿದೆ. ಸೋಂಕಿತರ ಆರೈಕೆಗೆ ಶ್ರವಣಬೆಳಗೊಳದ ಜೈನ ಮಠದಿಂದ 200ಕ್ಕೂ ಅಧಿಕ ಕೊಠಡಿಗಳನ್ನು ಬಿಟ್ಟುಕೊಡಲಾಗಿದೆ.

ಈಗಾಗಲೇ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಸುಮಾರು 400ಕ್ಕೂ ಅಧಿಕ ಮಂದಿ ಆರೈಕೆ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಸಿಸಿ ಕೇಂದ್ರಕ್ಕೆ ಜೈನ ಮಠದ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಠಕ್ಕೆ ಸೇರಿದ ಕಟ್ಟಡದ 200ಕ್ಕೂ ಅಧಿಕ ಕೊಠಡಿಗಳನ್ನು ಬಿಟ್ಟುಕೊಟ್ಟಿದ್ದಾರೆ.

ಕೋವಿಡ್ ಸೆಂಟರ್​ ಬಳಿಯಿಂದ ನಮ್ಮ ಪ್ರತಿನಿಧಿ ನೀಡಿದ ಮಾಹಿತಿ

ಶ್ರವಣಬೆಳಗೊಳದ ಕೋವಿಡ್ ಆರೈಕೆ ಕೇಂದ್ರ ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕಿತರು ದಾಖಲಾಗಿರುವ ಮತ್ತು ಚಿಕಿತ್ಸೆ ಪಡೆಯುತ್ತಿರುವ ಸಿಸಿ ಕೇಂದ್ರವಾಗಿದೆ.

ಓದಿ : ಸ್ವಕ್ಷೇತ್ರದ ಜನರ ಸಮಸ್ಯೆ ಆಲಿಸಿದ ಸಿಎಂ ಯಡಿಯೂರಪ್ಪ

ABOUT THE AUTHOR

...view details