ಕರ್ನಾಟಕ

karnataka

ETV Bharat / state

ಭಾರತ ಕಮ್ಯುನಿಸ್ಟ್ ಪಕ್ಷದಿಂದ ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ

ಲಾಕ್​ಡೌನ್ ದೇಶದ ಬಹುಪಾಲು ಜನಗಳ ಮೇಲೆ, ಅದರಲ್ಲೂ ದಲಿತರು, ಬುಡಕಟ್ಟು ಜನಗಳು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ವಿಕಲಾಂಗರು ಹೇಳತೀರದ ಸಂಕಷ್ಟ ಅನುಭವಿಸುತ್ತಿದ್ದರು, ಕೇಂದ್ರ ಬಿಜೆಪಿ ಸರ್ಕಾರ ಅವರ ನೆರವಿಗೆ ದಾವಿಸಲಿಲ್ಲ ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಆರೋಪಿಸಿದೆ.

Communist Party of India
ಭಾರತ ಕಮ್ಯುನಿಸ್ಟ್ ಪಕ್ಷದಿಂದ ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ

By

Published : Aug 24, 2020, 5:48 PM IST

ಹಾಸನ:ಕೊರೊನಾ ಸಂಕಷ್ಟದಲ್ಲಿರುವವರಿಗೆ ಆದಾಯ ತೆರಿಗೆ ವ್ಯಾಪ್ತಿಯಲ್ಲಿಲ್ಲದ ಎಲ್ಲರಿಗೂ 7,500 ರೂ. ನಗದು ಪರಿಹಾರ ಮತ್ತು ಕುಟುಂಬಕ್ಕೆ ಅಗತ್ಯವಾಗಿರುವ ದಿನಸಿಯನ್ನು ಪ್ರತಿ ತಿಂಗಳು ನೀಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.​

ಭಾರತ ಕಮ್ಯುನಿಸ್ಟ್ ಪಕ್ಷದಿಂದ ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ

ದೇಶದಲ್ಲಿ ಕೊರೊನಾ ಹಾವಳಿ ತೀವ್ರವಾಗುತ್ತಲೇ ಇದ್ದು, ಈಗಾಗಲೇ ಐವತ್ತು ಸಾವಿರ ಭಾರತೀಯರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.​ 50 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯ ದಿನಗಳ ಭವಿಷ್ಯ ನುಡಿಯುತ್ತಿದ್ದ ಜಾದೂಗಾರ ಮೋದಿ ತನ್ನ ವೈಫಲ್ಯವನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ದೂರಿದರು.

ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಿ ಸಾರ್ವಜನಿಕ ರಂಗವನ್ನು ಬಲಪಡಿಸಿ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಅವರ ಆದಾಯ ಹೆಚ್ಚಿಸಿ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸಬಹುದಾಗಿತ್ತು. ಆದರೆ ಮೋದಿ ಸರ್ಕಾರ ರೈಲ್ವೆ, ವಿದ್ಯುತ್, ಬಿಎಸ್ಎನ್ಎಲ್, ಕಲ್ಲಿದ್ದಲು, ಪೆಟ್ರೋಲಿಯಂ, ಬ್ಯಾಂಕಿಂಗ್, ವಿಮೆ ಮೊದಲಾದ ಹಣಕಾಸು ವಲಯವನ್ನು ಖಾಸಗೀಕರಣ ಮಾಡಿ ದೇಶದ ಆಸ್ತಿಯನ್ನು ಲೂಟಿ ಮಾಡಲು ಲಾಭಕೋರ ಕಾರ್ಪೋರೆಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಕೋವಿಡ್ ಹಾವಳಿ ಮತ್ತು ಅದು ಸೃಷ್ಟಿಸಿರುವ ಆತಂಕಕ್ಕೆ ಒಳಗಾಗಿ ಕಂಗೆಟ​ ದೇಶದ ಜನಸಾಮಾನ್ಯರಿಗೆ ಅಗತ್ಯ ಆರ್ಥಿಕ ನೆರವು, ಮಾನವೀಯ ನೆರವನ್ನು ಒದಗಿಸಬೇಕಾದ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಜನರ ಮೇಲೆ ಹೊರಲಾಗದ ಹೊರೆಗಳನ್ನು ಹೇರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details