ಹಾಸನ:ತಾಲೂಕಿನ ಕಸಬಾ ಹೋಬಳಿ, ಹಳೇ ಸರ್ವೆ ನಂ. 244 ಹೊಸ ಸರ್ವೆ ನಂ. 254 ಸತ್ಯಮಂಗಲ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನಿವೇಶನ ಹಂಚುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಡಾ. ಬಾಬು ಜಗಜೀವನ್‌ರಾಮ್ ಮಾದಿಗ ಮಹಾಸಭಾ ಪ್ರತಿಭಟನೆ ನಡೆಸಿತು.
ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹ: ಮಾದಿಗ ಮಹಾಸಭಾದಿಂದ ಪ್ರತಿಭಟನೆ!.. - ಹಾಸನ ಪ್ರತಿಭಟನೆ
ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ಹಿಂದುಳಿದ ಮಾದಿಗ ಜನಾಂಗಕ್ಕೆ ಸರ್ಕಾರಿ ಸವಲತ್ತುಗಳ ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಡಾ. ಬಾಬು ಜಗಜೀವನ್‌ರಾಮ್ ಮಾದಿಗ ಮಹಾಸಭಾದಿಂದ ಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ಹಿಂದುಳಿದ ಮಾದಿಗ ಸಮುದಾಯಕ್ಕೆ ಸರ್ಕಾರಿ ಸವಲತ್ತುಗಳ ಹಂಚಿಕೆಯಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ. ಈ ಅನ್ಯಾಯದ ವಿರುದ್ಧ ಅನೇಕ ಹೋರಾಟಗಳನ್ನು ಮಾಡುತ್ತ ಬಂದಿದ್ದರೂ ಸಾಮಾಜಿಕ ನ್ಯಾಯ ದೊರಕುತ್ತಿಲ್ಲ. ಸತ್ಯಮಂಗಲ ಗ್ರಾಮದ ಹಳೇ ಸರ್ವೆ ನಂ.244 ಹೊಸ ಸರ್ವೆ ನಂ. 254ರಲ್ಲಿ 2000-01ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ನಿವೇಶನ ಮಂಜೂರಾಗಿದೆ. ನಿವೇಶನಗಳು ಹಂಚುವಾಗ ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ಹಿಂದುಳಿದ ಮಾದಿಗ ಜನಾಂಗಕ್ಕೆ ಶೇ50 ರಷ್ಟು ಮೀಸಲಿನಲ್ಲಿ ನಿವೇಶನ ನೀಡಬೇಕು.
ಪರಿಶಿಷ್ಟ ಜಾತಿ, ಪಂಗಡದಲ್ಲಿ ವಾಲ್ಮೀಕಿ, ಬೋವಿ, ಲಂಬಾಣಿ, ಹಕ್ಕಿಪಿಕ್ಕಿ, ಶಿಳ್ಳೆಕ್ಯಾತ, ಕೊರಮ, ಕೊರಚ ಜನಾಂಗದವರಿಗೆ ಪ್ರಥಮ ಆದ್ಯತೆ ನೀಡಬೇಕು. ನಿವೇಶನ ಹಂಚುವಾಗ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಮತ್ತು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಒಳಗೊಂಡಂತೆ ನಿವೇಶನ ಆಯ್ಕೆ ಸಮಿತಿ ರಚಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.