ಮದ್ಯದಂಗಡಿ ತೆರೆಯಲು ಅನುಮತಿ: ಮಹಿಳೆಯರ ಪ್ರತಿಭಟನೆ - ಕೂಲಿ ಕಾರ್ಮಿಕರು
ಅರಸೀಕೆರೆ ತಾಲೂಕಿನ ಮುದುಡಿ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸೌಮ್ಯಾ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಜಿಲ್ಲಾಧಿಕಾರಿ ಅಕ್ರಂ ಪಾಷ್ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮನವಿ ಸಲ್ಲಿಸಿದರು.
ಹಾಸನ:ಜಿಲ್ಲೆಯ ಅರಸೀಕೆರೆ ತಾಲೂಕಿನ ಮುದುಡಿ ಗ್ರಾಮದಲ್ಲಿ ಮದ್ಯ ದಂಗಡಿ ತೆರೆಯಲು ಅನುಮತಿ ಕೊಟ್ಟಿರುವುದನ್ನು ವಿರೋಧಿಸಿ ಸೌಮ್ಯಾ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಮದ್ಯದಂಗಡಿ ತೆರೆಯಲು ಅನುಮತಿ ಕೊಟ್ಟಿರುವುದರಿಂದ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ. ಒಂದು ವೇಳೆ ಮದ್ಯದಂಗಡಿ ಆರಂಭವಾದರೆ ಶಾಂತಿಯುತವಾಗಿ ಜೀವನ ನಡೆಸುತ್ತಿರುವ ಹಳ್ಳಿಯ ಜನರು ನೆಮ್ಮದಿ ಹಾಳಾಗುತ್ತದೆ. ಈ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರೇ ಅಧಿಕವಾಗಿದ್ದು, ಅವರ ಕುಟುಂಬಗಳು ಬೀದಿಗೆ ಬರುವ ಸಂಭವವಿದೆ. ಹಾಗಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮದ್ಯದಂಗಡಿ ಪರವಾನಿಗೆಯನ್ನು ನೀಡಬಾರದು ಎಂದು ಮನವಿ ಮಾಡಿದರು.