ಹಾಸನ: ಬಿಜೆಪಿಯಿಂದ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ನೇತೃತ್ವದಲ್ಲಿ ಈಗಾಗಲೇ 37 ಸಾವಿರ ಆಹಾರ ಸಾಮಗ್ರಿಗಳ ಕಿಟ್ಗಳನ್ನು ನೀಡಲಾಗಿದ್ದು, ಮತ್ತೆ 25 ಸಾವಿರ ಕಿಟ್ಗಳ ವಿತರಣೆ ಮಾಡುವ ಸಿದ್ಧತೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿರತರಾಗಿದ್ದಾರೆ.
ಶಾಸಕ ಪ್ರೀತಮ್ ಗೌಡ ನೇತೃತ್ವದಲ್ಲಿ 25 ಸಾವಿರ ಆಹಾರದ ಕಿಟ್ ವಿತರಣೆಗೆ ಸಿದ್ಧತೆ - Hassan
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಶಾಸಕ ಪ್ರೀತಮ್ ಜೆ. ಗೌಡ ಅವರ ನೇತೃತ್ವದಲ್ಲಿ ಮೊದಲ ಹಂತದಲ್ಲಿ 37 ಸಾವಿರ ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಗಿದೆ. ಈಗ ಎರಡನೇ ಹಂತದಲ್ಲಿ 25 ಸಾವಿರ ಕಿಟ್ಗಳ ಸಿದ್ಧತೆಯಲ್ಲಿ ಬಿಜೆಪಿ ಕಾರ್ಯಕರ್ತರು ನಿರತರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ವೇಣುಗೋಪಾಲ್ ಲಾಕ್ಡೌನ್ ಆದೇಶ ಜಾರಿಗೆ ಬಂದ ದಿನದಿಂದ ಇಲ್ಲಿವರೆಗೂ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಅವರ ನೇತೃತ್ವದಲ್ಲಿ ಮೊದಲ ಹಂತದಲ್ಲಿ 37 ಸಾವಿರ ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಲಾಗಿದೆ. ಈಗ ಎರಡನೇ ಹಂತದಲ್ಲಿ ಉಳಿದ ಭಾಗಗಳಾದ ಎಪಿಎಂಸಿಯ ಕೂಲಿ ಕಾರ್ಮಿಕರಿಗೆ, ಹಮಾಲಿಗಳಿಗೆ ಮತ್ತು ಸಮಸ್ಯೆ ಎದುರಿಸುತ್ತಿರುವವರಿಗೆ ರೇಷನ್ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಇನ್ನು 2ನೇ ಹಂತದಲ್ಲಿ 25 ಸಾವಿರಕ್ಕೂ ಹೆಚ್ಚು ರೇಷನ್ ಕಿಟ್ಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಒಟ್ಟು 55 ಸಾವಿರ ರೇಷನ್ ಕಿಟ್ ನೀಡುವ ಗುರಿ ಹೊಂದಿರುವುದಾಗಿ ಇದೇ ವೇಳೆ, ಬೆಂಬಲಿಗರು ತಿಳಿಸಿದರು.