ಕರ್ನಾಟಕ

karnataka

ಆರ್.ಸಿ.ಇ.ಪಿ ಒಪ್ಪಂದಕ್ಕೆ ವಿರೋಧ: ಹಾಸನದಲ್ಲಿ ನ.7 ರಂದು ಪ್ರತಿಭಟನೆ

By

Published : Nov 3, 2019, 10:21 PM IST

ಆರ್. ಸಿ. ಇ. ಪಿ. ಒಪ್ಪಂದದ ಮೂಲಕ ದೇಶದ ಬೆನ್ನೆಲುಬಾಗಿರುವ ರೈತರನ್ನ ಕೇಂದ್ರ ಸರ್ಕಾರ ಬೀದಿಗೆ ತರುವಂತಹ ಕೆಲಸ ಮಾಡುತ್ತಿದೆ. ಹೀಗಾಗಿ ಹಾಸನದಲ್ಲಿ ನವೆಂಬರ್ 7ರಂದು ಬೃಹತ್ ಪ್ರತಿಭಟನೆ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಹೇಳಿದರು.

ಆರ್.ಸಿ.ಇ.ಪಿ ಒಪ್ಪಂದಕ್ಕೆ ವಿರೋಧ: ಹಾಸನದಲ್ಲಿ ನ.7 ರಂದು ಪ್ರತಿಭಟನೆ

ಹಾಸನ: ಆರ್. ಸಿ. ಇ. ಪಿ. ಒಪ್ಪಂದ ದೇಶದ ಬೆನ್ನೆಲುಬಾಗಿರುವ ರೈತರನ್ನ ಕೇಂದ್ರ ಸರ್ಕಾರ ಬೀದಿಗೆ ತರುವಂತಹ ಕೆಲಸ ಮಾಡುತ್ತಿದೆ ಹೀಗಾಗಿ ಹಾಸನದಲ್ಲಿ ನವೆಂಬರ್ 7ರಂದು ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ 20 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರ ಮೂಲಕ ಪ್ರತಿಭಟನೆ ಮಾಡುವುದಾಗಿ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಹೇಳಿದರು.

ಆರ್.ಸಿ.ಇ.ಪಿ ಒಪ್ಪಂದಕ್ಕೆ ವಿರೋಧ: ಹಾಸನದಲ್ಲಿ ನ.7 ರಂದು ಪ್ರತಿಭಟನೆ
ಇನ್ನು ಕೇಂದ್ರ ಸರ್ಕಾರ ಪುಲ್ವಾಮಾ ದಾಳಿ ಮತ್ತು ಬಾಲಕೋಟ್ ದಾಳಿ ಹೆಸರನ್ನು ಹೇಳಿಕೊಂಡು ಚುನಾವಣೆ ಮಾಡೋದು ವಾಡಿಕೆ ಆಗಿಬಿಟ್ಟಿದೆ. ಆದರೆ ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ಭಾಗದ ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಹೀಗಾಗಿ ನವಂಬರ್ 7 ರಂದು ಬೃಹತ್ ಹೋರಾಟ ಮಾಡಲಿದ್ದೇವೆ. ಜೊತೆಗೆ ನವೆಂಬರ್ 5ರಂದು ನಡೆಯುವ ಚುನಾವಣೆಯಲ್ಲಿ 10-12 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದರೆ, 2-3 ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲುತ್ತೆ. ಹೀಗಾಗಿ ಈ ಬಾರಿ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details