ಹಾಸನ:ಅಕ್ರಮ ಸಂಬಂಧ ಮುಂದುವರಿಸಲು ನಿರಾಕರಿಸಿದ ಪ್ರೇಯಸಿಯನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.
ನಿಂಗಮ್ಮ (35) ಪ್ರಿಯಕರನಿಂದ ಬರ್ಬರವಾಗಿ ಕೊಲೆಯಾದ ಮಹಿಳೆ. ಮುತ್ತು ಎಂಬಾತನೇ ಕೊಲೆಗೈದ ಆರೋಪಿ. ಬೇಲೂರು ತಾಲೂಕಿನ ನಾಗೇನಹಳ್ಳಿಯ ಕಾಫಿ ತೋಟದ ಮನೆಯೊಂದರಲ್ಲಿ ಹೂವಿನಹಡಗಲಿ ತಾಲೂಕಿನ ಹೊಸಹಳ್ಳಿ ಗ್ರಾಮದ ಕುಟುಂಬ ಕೆಲ ವರ್ಷಗಳಿಂದ ವಾಸವಾಗಿತ್ತು ಕೊಲೆಯಾದ ನಿಂಗಮ್ಮ ತನ್ನ ಪತಿ ದುರ್ಗಪ್ಪನಿಂದ ಹತ್ತು ವರ್ಷಗ ಹಿಂದೆ ಸಾಂಸಾರಿಕ ಕಲಹದಿಂದ ದೂರವಾಗಿದ್ದರು.
ಮೊನ್ನೆ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಕ್ಕ ಇಬ್ಬರು ಧರ್ಮಸ್ಥಳದಲ್ಲಿ ದರ್ಶನ ಮಾಡಿಕೊಂಡು ಮತ್ತೆ ಒಂದಾಗುವ ನಿರ್ಣಯಕ್ಕೆ ಬಂದಿದ್ದರು.
ಆದರೆ ಗಂಡ-ಹೆಂಡತಿ ಒಂದಾಗುವುದನ್ನು ಸಹಿಸದ ಮುತ್ತು ನನ್ನೊಂದಿಗೆ ಇರಬೇಕು ಎಂದು ನಿಂಗಮ್ಮನೊಂದಿಗೆ ಗಲಾಟೆ ಮಾಡುವ ಸಂಧರ್ಭದಲ್ಲಿ ಕೊಟ್ಟಿಗೆಯಲ್ಲಿದ್ದ ಚೂರಿಯನ್ನ ತೆಗೆದು ನಿಂಗಮ್ಮನ ಪಕ್ಕೆಲುಬು ಮತ್ತು ಇತರೆ ಭಾಗಗಳಿಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಇನ್ನು ಈ ಸಂಬಂಧ ಬೇಲೂರು ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.