ಕರ್ನಾಟಕ

karnataka

ETV Bharat / state

ಎತ್ತಿನಹೊಳೆ ಕಾಮಗಾರಿ ಪರಿಶೀಲನೆ ವೇಳೆ ಶಿವಲಿಂಗೇಗೌಡ-ರಮೇಶ್​‌ ಜಾರಕಿಹೊಳಿ ಏಟು-ಎದಿರೇಟು - ಎತ್ತಿನಹೊಳೆ ನೀರಾವರಿ ಯೋಜನೆೠ

ಎತ್ತಿನಹೊಳೆ ನೀರಾವರಿ ಯೋಜನೆಯ ಭಾಗವಾದ ಸುರಂಗಮಾರ್ಗ ವೀಕ್ಷಣೆ ವೇಳೆ ಪ್ರತಿಕ್ರಿಯಿಸಿದ ಜೆಡಿಎಸ್‌ ಶಾಸಕ, ನೀರಂತೂ ಬರಲ್ಲ ಫೋಟೋನಾದ್ರೂ ಹೊಡೀರಪ್ಪಾ. ಜನ ಅದನ್ನೇ ನೋಡಿ ಖುಷಿ ಪಡಲಿ ಎಂದರು. ಇದಕ್ಕೆ ಉತ್ತರಿಸಿದ ಸಚಿವ ರಮೇಶ್ ಜಾರಕಿಹೊಳಿ, ಯಾಕೆ ಗೌಡ್ರೇ ನೀರು ಬರಲ್ಲ. ಸಿದ್ದರಾಮಯ್ಯ ನಿಮಗೆ ಎಲ್ಲಾ ಮಾಡಿಕೊಟ್ಟಿದ್ದಾರಲ್ಲಾ? ಎಂದರು.

MLA Shivalinge gowda updset towards water project infrent of Ministers
ಸಚಿವರ ಸಮ್ಮುಖದಲ್ಲೇ ಶಾಸಕ ಅಸಮಾಧಾನ

By

Published : Jan 22, 2021, 8:31 PM IST

Updated : Jan 23, 2021, 10:16 AM IST

ಹಾಸನ: ಕಾಮಗಾರಿ ಆಗ್ತಿದೆ. ನೀರಂತೂ ಬರಲ್ಲ, ಫೋಟೋನಾದ್ರೂ ಹೊಡೀರಪ್ಪಾ. ಜನ ಇದನ್ನಾದರೂ ನೋಡಿ ಖುಷಿಪಡಲಿ ಎಂದು ಸಚಿವರ ಮುಂದೆಯೇ ಶಾಸಕ ಶಿವಲಿಂಗೇಗೌಡ ಅಸಮಾಧಾನ ಹೊರಹಾಕಿದ್ದಾರೆ.

ಎತ್ತಿನಹೊಳೆ ನೀರಾವರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದ ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್​ ಹಾಗೂ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಎದುರಲ್ಲೇ ಶಾಸಕ ಶಿವಲಿಂಗೇಗೌಡ ಈ ರೀತಿ ಅಸಮಾಧಾನ ತೋರಿಸಿದರು.

ಸಚಿವರ ಸಮ್ಮುಖದಲ್ಲೇ ಶಾಸಕರ ಅಸಮಾಧಾನ

ಇದಕ್ಕೆ ಉತ್ತರಿಸಿದ ಸಚಿವ ರಮೇಶ್ ಜಾರಕಿಹೊಳಿ, ಯಾಕೆ ಗೌಡ್ರೇ ನೀರು ಬರಲ್ಲ. ಸಿದ್ದರಾಮಯ್ಯ ನಿಮಗೆ ಎಲ್ಲಾ ಮಾಡಿಕೊಟ್ಟಿದ್ದಾರಲ್ಲ? ಎಂದರು.

ಅಲ್ಲೇ ಇದ್ದ ಯೋಗೇಶ್ವರ್ ಈ ವೇಳೆ 'ಇದೆಲ್ಲಾ ಬೇಡವಾಗಿತ್ತು' ಎಂದು ಅಲ್ಲಿಂದ ತೆರಳಿದರು.

ಇದನ್ನೂ ಓದಿ:ಇಂದು ನಡೆದ ಖಾತೆ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ: ರಮೇಶ್ ಜಾರಕಿಹೊಳಿ

Last Updated : Jan 23, 2021, 10:16 AM IST

ABOUT THE AUTHOR

...view details