ಕರ್ನಾಟಕ

karnataka

ETV Bharat / state

ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದ ಶಾಸಕ ರಾಮಸ್ವಾಮಿ - latest news for MLA Ramaswamy

ಶಾಸಕ ಎ. ಟಿ. ರಾಮಸ್ವಾಮಿ ಅರಕಲಗೂಡು ಕೊಣನೂರು ಹೋಬಳಿಯ ಸುಳುಗೋಡಿನ ಸೋಮವಾರ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

MLA Ramaswamy
ಶಾಸಕ ಎ. ಟಿ. ರಾಮಸ್ವಾಮಿ

By

Published : Jun 7, 2020, 12:14 AM IST

ಅರಕಲಗೂಡು : ಕೊಣನೂರು ಹೋಬಳಿಯ ಸುಳುಗೋಡಿನ ಸೋಮವಾರ ಗ್ರಾಮದಲ್ಲಿ ಶಾಸಕ ಎ. ಟಿ. ರಾಮಸ್ವಾಮಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಮಳೆಯಿಂದಾಗಿ ರಸ್ತೆ ಬೇಗ ಹಾಳಾಗುವ ಸಾಧ್ಯತೆಯಿದೆ. ಗುಣಮಟ್ಟದ ಕಾಮಗಾರಿಗೆ ಅಧಿಕಾರಿಗಳು, ಗುತ್ತಿಗೆದಾರರು
ಗಮನಹರಿಸಬೇಕೆಂದು ಸೂಚನೆ ನೀಡಿದರು.

ಗ್ರಾಮದ ಶಾಲೆಯ ಆವರಣದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಮತ್ತು ಐಟಿಸಿ ಪ್ರಾಯೋಜಕತ್ವದ ಭೈಫ್ ಅಭಿವೃದ್ದಿ ಯೋಜನೆ ಯವತಿಯಿಂದ 50 ಸಸಿಗಳನ್ನು ನೆಟ್ಟು ಸಾರ್ವಜನಿಕರಿಗೆ 500 ವಿವಿಧ ಹಣ್ಣಿನ ಸಸಿಗಳು 3 ಜನರಿಗೆ ಸೋಲಾರ್ ಲೈಟ್​ಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಸಹಾಯಕ ಮುಖ್ಯ ಅರಣ್ಯಧಿಕಾರಿ ಲಿಂಗರಾಜು, ವಲಯ ಅರಣ್ಯಾಧಿಕಾರಿ ಪಲ್ಲವಿ, ವೃತ್ತ ನಿರೀಕ್ಷಕಿ ಜಯಶೀಲ ಸೇರಿದಂತೆ ಇತರರು ಇದ್ದರು.

ABOUT THE AUTHOR

...view details