ಕರ್ನಾಟಕ

karnataka

ETV Bharat / state

ಈ ದೌಲತ್ತು ಹೆಚ್ಚು ದಿನ ನಡೆಯಲ್ಲ.. ಶಾಸಕ ಪ್ರೀತಂ ಗೌಡ ವಿರುದ್ಧ ಸ್ವಪಕ್ಷೀಯ ಎಂಎಲ್​ಎ ನಾಗೇಂದ್ರ ಗರಂ - ಶಾಸಕ ಪ್ರೀತಂಗೌಡಗೆ ಮೊಬೈಲ್ ಕರೆ

ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಕೆಂಡಾಮಂಡಲವಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಶಾಸಕ ನಾಗೇಂದ್ರ ಕಿಡಿ
ಶಾಸಕ ನಾಗೇಂದ್ರ ಕಿಡಿ

By

Published : Oct 23, 2022, 9:01 PM IST

ಹಾಸನ: ನಿಮ್ಮ ಶಾಸಕನ ದವಲತ್ತು ಹೆಚ್ಚು ದಿನ ನಡೆಯಲ್ಲ ರೀ, ನನಗೂ ಗೊತ್ತಿದೆ.. ಹೀಗೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಮೈಸೂರಿನ ಚಾಮರಾಜ ಕ್ಷೇತ್ರದ ಸ್ವಪಕ್ಷೀಯ ಶಾಸಕ ನಾಗೇಂದ್ರ ಕೆಂಡಾಮಂಡಲವಾಗಿ ಹಾಸನಾಂಬೆ ದೇವಾಲಯದಿಂದ ತೆರಳಿದ ಘಟನೆ ಭಾನುವಾರ ನಡೆದಿದೆ.

ಹಾಸನಾಂಬೆಯ ದರ್ಶನದ 11ನೇ ದಿನವಾದ ಇಂದು ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಸುಮಾರು ಒಂದರಿಂದ ಎರಡು ಲಕ್ಷ ಮಂದಿ ದರ್ಶನ ಪಡೆದಿದ್ದಾರೆ. ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ತಮ್ಮ ಕುಟುಂಬ ಸಮೇತ ದರ್ಶನಕ್ಕೆ ಬಂದ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ದರ್ಶನಕ್ಕೆ ಅವಕಾಶ ನೀಡದ ಹಿನ್ನೆಲೆ ಆಕ್ರೋಶಗೊಂಡ ಅವರು ಸ್ಥಳೀಯ ಶಾಸಕ ಪ್ರೀತಂ ಗೌಡಗೆ ಮೊಬೈಲ್ ಕರೆ ಮಾಡಿದ್ದಾರೆ.

ಒಂದಲ್ಲ.. ಎರಡಲ್ಲ ಅನೇಕ ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸಿದ ಹಿನ್ನೆಲೆ ನಾಗೇಂದ್ರ ಆಕ್ರೋಶಗೊಂಡಿದ್ದಾರೆ. ಕುಟುಂಬ ಸಮೇತ ಬಂದ ತಮಗೆ ಅಪಮಾನ ಮಾಡಿದ ಶಾಸಕರ ಮೇಲೆ ಕೆಂಡಾಮಂಡಲವಾಗಿ, ಕೂಗಾಡಿ ವಾಪಸ್ ಮೈಸೂರಿಗೆ ತೆರಳಿದ್ದಾರೆ.

ಶಾಸಕ ಪ್ರೀತಂ ಗೌಡ ವಿರುದ್ಧ ಶಾಸಕ ನಾಗೇಂದ್ರ ಕಿಡಿಕಾರಿದರು

ಕುಟುಂಬ ಸಮೇತ ವಾಪಸ್: ಸ್ಥಳದಲ್ಲಿದ್ದ ಶಾಸಕ ಪ್ರೀತಂ ಗೌಡರ ಆಪ್ತ ಶಿವಕುಮಾರ್ ಈ ವೇಳೆ ನಾಗೇಂದ್ರ ಅವರ ಮನವೊಲಿಸಿ ದರ್ಶನಕ್ಕೆ ಅವಕಾಶ ಕೊಡಿಸಲು ಮುಂದಾಗಿದ್ದಾರೆ. ಆದರೆ ನಿಮ್ಮ ಶಾಸಕ ನಿನ್ನ ಕರೆಯನ್ನು ಸ್ವೀಕರಿಸುತ್ತಾರೆ. ಆದರೆ ನಾನು ಮಾಡಿದರೆ ಸ್ವೀಕರಿಸುವುದಿಲ್ಲ. ಇಂತಹ ದೌಲತ್ತು ಹೆಚ್ಚು ದಿನ ನಡೆಯಲ್ಲ. ನನಗೆ ಗೊತ್ತಿದೆ, ನಾನು ನಾಳೆ ಜಿಲ್ಲಾಡಳಿತದ ಮೂಲಕವೇ ಬಂದು ದರ್ಶನ ಪಡೆಯುತ್ತೇನೆ. ನಿಮ್ಮ ಶಾಸಕನಿಗೆ ಹೇಳು ಅಂತ ಗರಂ ಆದರು.

ದೇವರಿಗೆ ನೈವೇದ್ಯ ಸಮರ್ಪಣೆ:ಇನ್ನು, ಪ್ರತಿನಿತ್ಯ ಒಂದು ಗಂಟೆಯಿಂದ ಮೂರು ಗಂಟೆ ತನಕ ದೇವರಿಗೆ ನೈವೇದ್ಯ ಸಮರ್ಪಣೆ ಮಾಡುವ ಹಿನ್ನೆಲೆ ಬಾಗಿಲು ಹಾಕಲಾಗಿರುತ್ತದೆ. ಈ ವೇಳೆ ಶಾಸಕ ನಾಗೇಂದ್ರ ಕುಟುಂಬ ಸಮೇತ ದರ್ಶನಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ.

ಓದಿ:ಸೋಮಣ್ಣ ಸಚಿವರಾಗಲು ನಾಲಾಯಕ್, ಮಹಿಳೆ ಮೇಲೆ ಕೈಮಾಡಿದ್ದು ಅವರ ಸಂಸ್ಕೃತಿ ತೋರಿಸುತ್ತಿದೆ: ಸಿದ್ದರಾಮಯ್ಯ

ABOUT THE AUTHOR

...view details