ಹಾಸನ: ಅರಸೀಕೆರೆಯಿಂದ ಮೈಸೂರಿಗೆ ಹೋಗುತ್ತಿದ್ದ ರೈಲು, ಹಾಸನದ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಾಗ ನಿಲ್ದಾಣದ ಸಮೀಪದಲ್ಲಿ ವ್ಯಕ್ತಿ ಒಬ್ಬ ಹಳಿಗೆ ತಲೆ ಕೊಟ್ಟು ಸಾವನಪ್ಪಿರುವ ಘಟನೆ ಹಾಸನ ರೈಲು ನಿಲ್ದಾಣದಲ್ಲಿ ನಡೆದಿದೆ.
ಹಾಸನ ರೈಲು ನಿಲ್ದಾಣದಲ್ಲಿ ಹಳಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ!
ಅರಸೀಕೆರೆಯಿಂದ ಮೈಸೂರಿಗೆ ಹೋಗುತ್ತಿದ್ದ ರೈಲು, ಹಾಸನದ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಾಗ ನಿಲ್ದಾಣದ ಸಮೀಪದಲ್ಲಿ ವ್ಯಕ್ತಿ ಒಬ್ಬ ಹಳಿಗೆ ತಲೆ ಕೊಟ್ಟು ಸಾವನಪ್ಪಿರುವ ಘಟನೆ ಹಾಸನ ರೈಲು ನಿಲ್ದಾಣದಲ್ಲಿ ನಡೆದಿದೆ.
ರೈಲು ವ್ಯಕ್ತಿಯ ತಲೆ-ಕುತ್ತಿಗೆ ಮೇಲೆ ಹರಿದಿದ್ದರಿಂದ ರುಂಡ-ಮುಂಡಗಳು ಬೇರ್ಪಟ್ಟಿವೆ. ಸುಮಾರು 45 ವರ್ಷ ಇರಬಹುದು ಎಂದು ಗುರುತಿಸಲಾಗಿದ್ದು, ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ. ಮೊಬೈಲ್ನಲ್ಲಿ ಮಾತನಾಡುತ್ತಾ ಹೆಜ್ಜೆ ಹಾಕಿದ ಈತ ರೈಲು ಸಮೀಪಿಸುತ್ತಿದ್ದಂತೆ ರೈಲಿನ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪ್ರಕರಣ ದಾಖಲಿಸಿ ಆತನ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಮಾತನಾಡಿಕೊಳ್ಳುವಂತೆ ಇತ ಉದಯಗಿರಿ ಬಡಾವಣೆ, ರಾಜಘಟ್ಟದ ನಿವಾಸಿಯಾಗಿರಬಹುದು ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.