ಕರ್ನಾಟಕ

karnataka

ETV Bharat / state

ಗಾಂಧೀಜಿ ಜೀವನ ಸಂದೇಶವನ್ನು ಎಲ್ಲರೂ ರೂಡಿಸಿಕೊಳ್ಳಬೇಕು: ಶಿವಲಿಂಗೇಗೌಡ - ಗಾಂಧೀಜಿಯವರ 150ನೇ ಜನ್ಮದಿನೋತ್ಸವ

ಬ್ರಿಟಿಷರು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದು ಎಲ್ಲಾ ಕಡೆಯಲ್ಲೂ ಹಿಂಸೆಯಿಂದ ಹೋರಾಟ ನಡೆಸಿದ್ದರೆ, ಭಾರತದಲ್ಲಿ ಅಹಿಂಸೆಯಿಂದ ಹೋರಾಟ ನಡೆಸಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದು, ಮಹಾತ್ಮ  ಗಾಂಧೀಜಿಯವರ ಜೀವನ ಸಂದೇಶವನ್ನು ಎಲ್ಲರೂ ರೂಡಿಸಿಕೊಳ್ಳಬೇಕು ಎಂದು ಶಾಸಕ ಶಿವಲಿಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ

ಶಿವಲಿಂಗೇಗೌಡ

By

Published : Oct 3, 2019, 12:01 AM IST

ಹಾಸನ: ಬ್ರಿಟಿಷರು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದು ಎಲ್ಲಾ ಕಡೆಯಲ್ಲೂ ಹಿಂಸೆಯಿಂದ ಹೋರಾಟ ನಡೆಸಿದ್ದರೆ, ಭಾರತದಲ್ಲಿ ಅಹಿಂಸೆಯಿಂದ ಹೋರಾಟ ನಡೆಸಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದು, ಮಹಾತ್ಮ ಗಾಂಧೀಜಿಯವರ ಜೀವನ ಸಂದೇಶವನ್ನು ಎಲ್ಲರೂ ರೂಡಿಸಿಕೊಳ್ಳಬೇಕು ಎಂದು ಶಾಸಕ ಶಿವಲಿಂಗೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಶಾಸಕ ಶಿವಲಿಂಗೇಗೌಡ ಮಾತನಾಡಿದ್ದಾರೆ
ಜಿಲ್ಲೆಯ ಅರಸೀಕೆರೆಯ ಕಸ್ತೂರಬಾ ರಾಷ್ಟ್ರೀಯ ಗಾಂಧಿ ಸ್ಮಾರಕ ಟ್ರಸ್ಟ್ ನಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜನೆ ಮಾಡಲಾಗಿದ್ದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ರು.

ಗೈಡ್ ಲೈನ್ ಇಂಟರ್ ನ್ಯಾಷನಲ್ ಶಾಲೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ:
ಸ್ವಚ್ಛತಾ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಗಾಂಧಿ ಜಯಂತಿಯನ್ನು ಆಚರಿಸಬೇಕು ಎಂದು ಗೈಡ್‌ಲೈನ್‌ ಶಾಲೆಯ ಅಧ್ಯಕ್ಷ ಕೆ.ಆರ್.ರಮೇಶ್ ಅಭಿಪ್ರಾಯಪಟ್ಟರು. ಶ್ರವಣಬೆಳಗೊಳದ ಹೊರ ವಲಯದಲ್ಲಿರುವ ಸಂತೆ ಮೈದಾನವನ್ನು ಶ್ರಮಧಾನದೊಂದಿಗೆ ಸ್ವಚ್ಛಗೊಳಿಸುವ ಮೂಲಕ ಚಾಲನೆ ನೀಡಿದರು.
ಗಾಂಧೀಜಿಯವರ 150ನೇ ಜನ್ಮದಿನೋತ್ಸವ ಅಂಗವಾಗಿ ನಗರದ ಗೈಡ್‌ಲೈನ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ ವತಿಯಿಂದ ಹಮ್ಮಿಕೊಂಡಿದ್ದ ಸಂತೆ ಮೈದಾನ ಸ್ವಚ್ಛತಾ ಕಾರ್ಯಕ್ರಮ ಬಳಿಕ ರಮೇಶ್ ಮಾತನಾಡಿದರು. ಎಲ್ಲೆಂದರಲ್ಲಿ ಕಸ ಎಸೆಯುವ ಮೂಲಕ ನಾವೇ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಇನ್ನು ವಿಷಯುಕ್ತ ಪ್ಲಾಸ್ಟಿಕನ್ನು ಬಳಕೆ ಮಾಡುವ ಮೂಲಕ ಪರಿಸರ ಹಾಳಾಗುತ್ತಿದ್ದು ಆರೋಗ್ಯದ ಮೇಲೂ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತಿದೆ. ಹಾಗಾಗಿ ನಾವೆಲ್ಲರೂ ನಮ್ಮ ಮತ್ತು ನಮ್ಮ ಪರಿಸರವನ್ನು ಹಸಿರುಯುಕ್ತ ಮಾಡಿಕೊಂಡು ಬದುಕ ಬೇಕು, ಇಲ್ಲವಾದರೆ ಮುಂದೊಂದು ದಿನ ಪರಿಸರವೇ ನಮಗೆ ಮಾರಕವಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ABOUT THE AUTHOR

...view details