ಹಾಸನ:ಕೆಲಸದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದ ವಕೀಲ ಮಂಜೇಗೌಡ ಎಂಬುವರು ಸುಮಾರು 45 ನಿಮಿಷಗಳ ಕಾಲ ಲಿಫ್ಟ್ನೊಳಗೆ ಸಿಲುಕಿದ್ದ ಘಟನೆ ನಡೆದಿದೆ.
45 ನಿಮಿಷಗಳ ಕಾಲ ಲಿಫ್ಟ್ನೊಳಗೆ ಸಿಲುಕಿದ್ದ ವಕೀಲ... ಮುಂದೇನಾಯ್ತು?
ವ್ಯಕ್ತಿಯೋರ್ವರ ಮನೆ ಮುಳುಗಡೆ ವಿಚಾರವಾಗಿ ಮಾತನಾಡಲು ಭೂ ಸ್ವಾಧೀನ ಕಚೇರಿಗೆ ತೆರಳಿದ್ದ ವಕೀಲ ಮಂಜೇಗೌಡ ಎಂಬುವರು ಸುಮಾರು 45 ನಿಮಿಷಗಳ ಕಾಲ ಲಿಫ್ಟ್ನೊಳಗೆ ಸಿಲುಕಿದ್ದ ಘಟನೆ ನಡೆದಿದೆ.
ವಕೀಲ ಮಂಜೇಗೌಡರು ವ್ಯಕ್ತಿಯೋರ್ವರ ಮನೆ ಮುಳುಗಡೆ ವಿಚಾರವಾಗಿ ಮಾತನಾಡಲು ಭೂ ಸ್ವಾಧೀನ ಕಚೇರಿಗೆ ತೆರಳಿ ವಾಪಸ್ ಬರುತ್ತಿದ್ದರು. ಈ ವೇಳೆ ವಿದ್ಯುತ್ ಕಡಿತಗೊಂಡು ಲಿಫ್ಟ್ನಲ್ಲಿ ಸಿಲುಕಿಕೊಂಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಒಳಗೆ ಸಿಲುಕಿಕೊಂಡಿದ್ದ ಅವರು, ಬಳಿಕ ಮಾನವ್ ಎಂಬುವರಿಗೆ ಕರೆ ಮಾಡಿದ್ದಾರೆ. ಬಳಿಕ ಮಾನವ್ ಅವರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದು, ಬಳಿಕ ಸಿಬ್ಬಂದಿ ಆಗಮಿಸಿ ಲಿಫ್ಟ್ ಬಾಗಿಲು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಮಂಜೇಗೌಡ, ಬೆಳಿಗ್ಗೆ 10.30ರ ಸಮಯದಲ್ಲಿ ಡಿಸಿ ಕಚೇರಿಗೆ ಕೆಲಸದ ನಿಮಿತ್ತ ಬಂದಿದ್ದೇನೆ. ಅಲ್ಲಿಂದ ಕೆಲಸ ಮುಗಿಸಿ ಹಿಂತಿರುಗುವಾಗ ಲಿಫ್ಟ್ ಸ್ಥಗಿತಗೊಂಡಿದೆ. ಇದರಿಂದ ಭಯವಾಯಿತು. ಸುಮಾರು 45 ನಿಮಿಷಗಳ ಕಾಲ ಒಂಗಡೆ ಸಿಲುಕಿಕೊಂಡಿದ್ದೆ ಎಂದರು.