ಹಾಸನ:ನಿರಾಶ್ರಿತರಿಗೆ ತಾತ್ಕಾಲಿಕವಾದ ತೇಪೆ ಪರಿಹಾರ ಕೊಡಬೇಡಿ. ಅವರಿಗೆ ಪ್ರತಿ ವರ್ಷ ಸಂಕಷ್ಟಕ್ಕೆ ಒಳಗಾಗದ ರೀತಿಯಲ್ಲಿ ಶಾಶ್ವತವಾದ ಪರಿಹಾರ ನೀಡಿ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ನಿರಾಶ್ರಿತರಿಗೆ ತಾತ್ಕಾಲಿಕ ತೇಪೆ ಪರಿಹಾರ ಕೊಡಬೇಡಿ: ಕುಮಾರಸ್ವಾಮಿ - ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
ಹಾಸನದಲ್ಲಿ ನಿರಾಶ್ರಿತರಿಗೆ ಶಾಶ್ವತವಾದ ಪರಿಹಾರ ನೀಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಹೆಚ್.ಡಿ. ಕುಮಾರಸ್ವಾಮಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ 6ರಿಂದ 7 ಬಾರಿ ಒಂದು ತಿಂಗಳಲ್ಲಿ ಪ್ರವಾಸ ಕೈಗೊಂಡು ಜನರಿಗೆ ಧೈರ್ಯ ಹೇಳಿದ್ದೆ. ಅಲ್ಲಿ ಮನೆ ನಿರ್ಮಾಣಗೊಂಡಿದೆ. ಆದರೆ ಸರ್ಕಾರ ಆ ಫಲಾನುಭವಿಗಳಿಗೆ ಮನೆಗಳನ್ನು ನೀಡುವಂತಹ ಪ್ರಯತ್ನ ಮಾಡಿಲ್ಲ ಎಂದರು.