ಕರ್ನಾಟಕ

karnataka

ETV Bharat / state

ಕಾರ್ಗಿಲ್​  ಕಲಿಗಳಿಗೆ ದೀಪ ನಮನ: ಬಲಿದಾನದ ಸ್ಮರಣೆ

1999 ರ ಕಾರ್ಗಿಲ್​ ಯುದ್ಧದ ವಿಜಯೋತ್ಸವ ಸ್ಮರಣಾರ್ಥ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ವೀರಯೋಧರಿಗೆ ವಿಭಿನ್ನವಾಗಿ ಗೌರವ ನಮನ ಅರ್ಪಿಸಲಾಯ್ತು.

By

Published : Jul 27, 2019, 6:47 AM IST

ಕಾರ್ಗಿಲ್ ನಲ್ಲಿ ಹುತಾತ್ಮರಾದ ವೀರ ಯೋಧರಿಗೆ ದೀಪ ನಮನ

ಹಾಸನ:ಕಾರ್ಗಿಲ್ ವಿಜಯೋತ್ಸವದ ಹಿನ್ನೆಲೆ ವೀರಮರಣವನ್ನಪ್ಪಿದ ಸೈನಿಕರಿಗೆದೀಪ ನಮನದ ಮೂಲಕ ಗೌರವ ಸಮರ್ಪಿಸಲಾಯಿತು.

ಚನ್ನರಾಯಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಇಂಡಿಯನ್ ಕ್ರಿಕೆಟರ್ಸ್ ಸಂಘದ ವತಿಯಿಂದ ಕಾರ್ಗಿಲ್ ಯೋಧರಿಗೆ ದೀಪ ನಮನ ಕಾರ್ಯಕ್ರಮವನ್ನು ನಡೆಸಲಾಯಿತು. ಹುತಾತ್ಮ ಯೋಧರನ್ನು ನೆನೆದು, ಜ್ಯೋತಿ ಬೆಳಗಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಕಾರ್ಗಿಲ್ ನಲ್ಲಿ ಹುತಾತ್ಮರಾದ ವೀರ ಯೋಧರಿಗೆ ದೀಪ ನಮನ

ಸಾಮಾಜಿಕ ಕಾರ್ಯಕರ್ತ ಆನಂದ್ ಮಾತನಾಡಿ,1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ವಿಜಯೋತ್ಸವವನ್ನ ಪ್ರತಿವರ್ಷ ಜು.26ರಂದು ಆಚರಿಸುತ್ತಾ ಬಂದಿದ್ದು, ಸೈನಿಕರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲಾಗುತ್ತದೆ ಎಂದರು. ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿದ ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್, ಚಂದ್ರಶೇಖರ್ ಆಜಾದ್ ಮುಂತಾದವರು ಸ್ವಾತಂತ್ರ ಹೋರಾಟದ ಸಮಯದಲ್ಲಿ ಅನುಭವಿಸಿದ ಕಷ್ಟ, ಅವರ ಸಾಹಸ ಕಥೆಗಳನ್ನು ಹೇಳುತ್ತಾ ವೀರ ಯೋಧರ ಸಾಹಸಗಾಥೆಯನ್ನು ಕೂಡ ನೆನೆದರು.

ABOUT THE AUTHOR

...view details