ತುಮಕೂರು: ಹಾಸನ ಜಿಲ್ಲೆಯನ್ನು ರೈಲ್ವೆ ಹಳಿ ಮೇಲೆ ತರುವ ಸಾಮರ್ಥ್ಯ ನನಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಸ್ವಾಮಿ ಹೇಳಿದ್ದು, ಪರೋಕ್ಷವಾಗಿ ಜಿಲ್ಲಾಭಿವೃದ್ದಿಗೆ ಪಣತೊಡುವುದಾಗಿ ಭರವಸೆ ಕೊಟ್ಟರು.
ಹಾಸನ ಜಿಲ್ಲೆಯನ್ನು ರೈಲ್ವೆ ಹಳಿ ಮೇಲೆ ತರುವ ಶಕ್ತಿ ನನಗಿದೆ: ಸಚಿವ ಮಾಧುಸ್ವಾಮಿ
ಹಾಸನವನ್ನು ರೈಲ್ವೆ ಹಳಿಯ ಮೇಲೆ ತರುವ ಸಾಮರ್ಥ್ಯ ನನಗಿದೆ, ಹಾಗಾಗಿ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಹೇಳುವ ಮೂಲಕ ಜಿಲ್ಲಾಡಳಿತವನ್ನು ಸರಿದಾರಿಗೆ ತರುವುದಾಗಿ ಹೇಳಿದ್ದಾರೆ.
ಸಚಿವ ಮಾಧುಸ್ವಾಮಿ
ಹಾಸನ ಕರ್ನಾಟಕದ ರಾಜ್ಯದೊಳಗಿದೆ. ಜಿಲ್ಲೆಯನ್ನು ಯಾರಿಗೂ ಬರೆದು ಕೊಟ್ಟಿಲ್ಲ. ನನಗನ್ನಿಸಿದ ಮಟ್ಟಿಗೆ ನಾನು ಮಾಡುವ ಕೆಲಸಗಳಿಗೆ ಯಾರಿಂದಲೂ ಹಸ್ತಕ್ಷೇಪವಿಲ್ಲ ಎಂದು ದೇವೇಗೌಡರ ಕುಟುಂಬಕ್ಕೆ ಪರೋಕ್ಷ ಟಾಂಗ್ ನೀಡಿದ್ರು.
ತುಮಕೂರಿಗಿಂತ ಹಾಸನ ನನಗೆ ಚೆನ್ನಾಗಿದೆ. ಅಧಿಕಾರಿಗಳು ನನ್ನ ಮಾತು ಕೇಳಬೇಕು ಎಂದು ಅಪೇಕ್ಷೆ ಮಾಡುವ ರಾಜಕಾರಣಿ ನಾನಲ್ಲ. ಅಧಿಕಾರಿಗಳು ಅವರ ಕಾನೂನು, ನಿಯಮಾವಳಿ ಕಳಗೆ ಕೆಲಸ ಮಾಡಲಿ ಎಂದು ಸಚಿವರು ಹೇಳಿದ್ರು.