ಅರಕಲಗೂಡು: ಗಾಳಿ ಸಹಿತ ಸುರಿದ ಮಳೆಗೆ ಮನೆಯ ಹಂಚುಗಳು ಹಾರಿಹೋದ ಘಟನೆ ತಾಲೂಕಿನ ಕೊಣನೂರು ಹೋಬಳಿಯ ಕಾಡನೂರು ಗ್ರಾಮದಲ್ಲಿ ನಡೆದಿದೆ.
ಗಾಳಿ ಸಹಿತ ಭಾರಿ ಮಳೆ: ನೆಲಕಚ್ಚಿದ ಜೋಳ - Heavy rain in hassan
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸಂಭವಿಸಿದ್ದು, ಮನೆಯ ಮೇಲಿನ ಹೆಂಚುಗಳು ಹಾರಿ ಹೋಗಿವೆ. ಫಸಲಿಗೆ ಬಂದಿದ್ದ ಬೆಳೆ ನಾಶವಾಗಿದೆ.
ನೆಲಕಚ್ಚಿದ ಜೋಳದ ಬೆಳೆ
ಕಾಡನೂರು ಗ್ರಾಮದ ನಿವಾಸಿ ಅಳಸಿಂಗ್ರಯ್ಯನವರಿಗೆ ಸೇರಿದ ಮನೆ ಇದಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬಿರುಗಾಳಿ ಸಹಿತ ಸುರಿದ ಮಳೆಗೆ ಫಸಲಿಗೆ ಬಂದಿದ್ದ ಜೋಳದ ಬೆಳೆ ಸಂಪೂರ್ಣ ನೆಲಕಚ್ಚಿದೆ.
ಈ ಭಾಗದ ರೈತರ ಆರ್ಥಿಕ ಬೆಳೆಯಾದ ಜೋಳ ಮಳೆಯಿಂದಾಗಿ ನಾಶವಾಗಿದ್ದು ರೈತರಿಗೆ ನಷ್ಟ ಉಂಟಾಗಿದೆ. ಹಾಗಾಗಿ, ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮದ ರೈತರು ಮನವಿ ಮಾಡಿದರು.