ಅರಕಲಗೂಡು: ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಮರವೊಂದು ರಸ್ತೆ ಮೇಲೆ ಬಿದ್ದು ಅವಾಂತರ ಸೃಷ್ಟಿಸಿದೆ. ವಾಹನ ಸಂಚಾರ ಸ್ಥಗಿತಗೊಂಡಿದೆ.
ಅರಕಲಗೂಡಿನಲ್ಲಿ ಧರೆಗುರುಳಿದ ಮರ... ವಾಹನ ಸಂಚಾರ ಸ್ಥಗಿತ! - Arakalagudu Hassan latest news
ಭಾರೀ ಮಳೆಯಾಗುತ್ತಿರುವ ಪರಿಣಾಮ ಪಟ್ಟಣದಿಂದ ರಾಮನಾಥಪುರಕ್ಕೆ ಸಾಗುವ ಹೆದ್ದಾರಿ ರಸ್ತೆಯ ಮೇಲೆ ಮರವೊಂದು ಉರುಳಿ ಬಿದ್ದಿದೆ.
Tree fell down on road
ಪಟ್ಟಣದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಇಂದು ಪಟ್ಟಣದಿಂದ ರಾಮನಾಥಪುರಕ್ಕೆ ಸಾಗುವ ಹೆದ್ದಾರಿ ರಸ್ತೆಯ ಮೇಲೆ ಚಿಲುಮೆ ಮಠದ ಬಳಿ ಮರವೊಂದು ಉರುಳಿ ಬಿದ್ದಿದೆ. ಮಳೆ, ಗಾಳಿ ಇದ್ದುದರಿಂದ ಮರ ರಸ್ತೆಗೆ ಉರುಳಿದ್ದು ಸಂಚಾರ ಬಂದ್ ಆಗಿದೆ. ಸದ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.