ಹಾಸನ:ಇವತ್ತು ಕಾಂಗ್ರೆಸ್ ಪಕ್ಷ ಉಳಿದಿದೆ ಎಂದರೆ ಅದು ಸಿದ್ದರಾಮಯ್ಯ ಅವರು ಇರೋದ್ರಿಂದ ಅಷ್ಟೆ. ಅವರು ಇವತ್ತು ಕಾಂಗ್ರೆಸ್ ಬಿಟ್ಟರೆ ಪಕ್ಷ ಸರ್ವನಾಶ ಆಗುತ್ತೆ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಮಾಜಿ ಸಚಿವ ಎಚ್. ಡಿ ರೇವಣ್ಣ ಬ್ಯಾಟಿಂಗ್ ಮಾಡಿದರು. ಹಾಸನದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯ ಇರೋದ್ರಿಂದ ಕಾಂಗ್ರೆಸ್ ಉಳಿದಿದೆ. ಇವತ್ತು 70 ಪರ್ಸೆಂಟ್ ಕಾಂಗ್ರೆಸ್ ಬಂದಿದೆ ಎಂದರೆ ಅದಕ್ಕೆ ಸಿದ್ದರಾಮಯ್ಯ ಕಾರಣ ಎಂದರು.
ದೇವೇಗೌಡರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ್ದು ಕಾಂಗ್ರೆಸ್. ಅಂತಹ ಕೆಟ್ಟ ಕೆಲಸ ಮಾಡಿದ್ದಕ್ಕೆ ಇವತ್ತು ಕಾಂಗ್ರೆಸ್ ನಿರ್ನಾಮ ಆಗ್ತಾ ಇದೆ ಎಂದರು. ಇನ್ನು ರಾಮನಗರದಲ್ಲಿ ಡಿ.ಕೆ ಸುರೇಶ್ ಅವರನ್ನು ಎಂಪಿ ಮಾಡಲಿಲ್ಲ. ನಿಮ್ಮ ಸಹೋದರ ಅಧ್ಯಕ್ಷರಾಗಿದ್ದಾರೆ. ಗಂಭೀರವಾಗಿ ಪಕ್ಷ ಸಂಘಟನೆ ಮಾಡಿ. ಅದನ್ನ ಬಿಟ್ಟು ನಮ್ಮ ವಿರುದ್ಧ ಹೇಳಿಕೆ ನೀಡಿದರೆ ನಿಮ್ಮ ಬಗ್ಗೆ ನಾನು ಮಾತನಾಡಬೇಕಾಗುತ್ತದೆ ಎಂದು ಗುಡುಗಿದರು.