ಕರ್ನಾಟಕ

karnataka

ETV Bharat / state

ಮರ್ಯಾದೆ ಕೊಟ್ಟು ಮಾತ್ನಾಡಿಸಿ.. ಮಾಜಿ ಸಚಿವ ಹೆಚ್‌ ಡಿ ರೇವಣ್ಣ ವಿರುದ್ಧ ಜಿಪಂ ಅಧ್ಯಕ್ಷೆ ಗುಡುಗು

15ನೇ ಹಣಕಾಸಿಗೆ ಸಂಬಂಧಪಟ್ಟಂತೆ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಮಾತನಾಡುತ್ತಿದ್ದರು. ಈ ವೇಳೆ ಅಧ್ಯಕ್ಷೆ ಶ್ವೇತಾ ದೇವರಾಜ್ ತಮ್ಮ ಮೇಲೆ ಕೇಳಿ ಬರುತ್ತಿರುವ ಆರೋಪಗಳಿಗೆ ಸಮರ್ಥನೆ ನೀಡಲು ಮುಂದಾದರು..

Hassan District Panchayat General Meeting
ಹಾಸನ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ...ರೇವಣ್ಣ ವಿರುದ್ಧ ಗುಡುಗಿದ ಅಧ್ಯಕ್ಷೆ

By

Published : Jun 20, 2020, 8:39 PM IST

ಹಾಸನ:ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶ್ವೇತಾ ದೇವರಾಜ್ ಸಾಮಾನ್ಯ ಸಭೆಯಲ್ಲಿ ತಮ್ಮ ವಿರುದ್ಧ ಏಕವಚನ ಪ್ರಯೋಗಿಸಿದ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಹಾಸನ ಜಿಪಂ ಸಾಮಾನ್ಯ ಸಭೆ.. ರೇವಣ್ಣ ವಿರುದ್ಧ ಗುಡುಗಿದ ಅಧ್ಯಕ್ಷೆ

ಜಿಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 15ನೇ ಹಣಕಾಸಿಗೆ ಸಂಬಂಧಪಟ್ಟಂತೆ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಮಾತನಾಡುತ್ತಿದ್ದರು. ಈ ವೇಳೆ ಅಧ್ಯಕ್ಷೆ ಶ್ವೇತಾ ದೇವರಾಜ್ ತಮ್ಮ ಮೇಲೆ ಕೇಳಿ ಬರುತ್ತಿರುವ ಆರೋಪಗಳಿಗೆ ಸಮರ್ಥನೆ ನೀಡಲು ಮುಂದಾದರು. ಆಗ ಮಾಜಿ ಸಚಿವ ರೇವಣ್ಣ, ಏಯ್ ನೋಡಮ್ಮ ನಾನು ನಿನ್ನ ಮಾತನಾಡಿಸುತ್ತಿಲ್ಲ ಎಂದು ಏಕವಚನ ಪ್ರಯೋಗಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಶ್ವೇತಾ ದೇವರಾಜ್, ಮರ್ಯಾದೆ ಕೊಟ್ಟು ಮಾತನಾಡಿಸಿ ಎಂದು ರೇವಣ್ಣ ವಿರುದ್ಧ ಕಿಡಿಕಾರಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಭವಾನಿ ರೇವಣ್ಣ, ತಮ್ಮ ಪತಿ ರೇವಣ್ಣ ಪರ ಎದ್ದು ನಿಂತರು. ಹಾಗೆ ಎಂಎಲ್‌ಸಿ ಎಂ ಎ ಗೋಪಾಲಸ್ವಾಮಿ ತಮ್ಮ ಪಕ್ಷದ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಪರ ಮಾತನಾಡಿದರು. ಈ ವಾಗ್ವಾದಿಂದ ಸಭೆಯಲ್ಲಿ ಸ್ವಲ್ಪ ಕಾಲ ಗೊಂದಲದ ವಾತಾವರಣ ಉಂಟಾಯಿತು.

ABOUT THE AUTHOR

...view details