ಕರ್ನಾಟಕ

karnataka

ETV Bharat / state

ಹಾಸನ ಜಿಲ್ಲಾಧಿಕಾರಿ ವರ್ಗಾವಣೆ... ಡಿಸಿಯಾಗಿ ಮತ್ತೆ ಪಾಷ ನೇಮಕ ​​​​​ - kannada news

ಹಾಸನ ಜಿಲ್ಲಾಧಿಕಾರಿ ಪ್ರಿಯಾಂ ಮೇರಿ ಫ್ರಾನ್ಸಿಸ್​ರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಮತ್ತೊಮ್ಮೆ ಅಕ್ರಂ ಪಾಷಾ ಅವರನ್ನು ನೇಮಕ ಮಾಡಿದೆ.

ಹಾಸನ ಡಿಸಿ ಪ್ರಿಯಾಂ ಮೇರಿ ಫ್ರಾನ್ಸಿಸ್​ರ ವರ್ಗಾವಣೆ ​​​​​​​

By

Published : May 30, 2019, 3:11 AM IST

ಹಾಸನ:ಜಿಲ್ಲಾಧಿಕಾರಿ ಪ್ರಿಯಾಂ ಮೇರಿ ಫ್ರಾನ್ಸಿಸ್​ರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನೂತನ ಜಿಲ್ಲಾಧಿಕಾರಿಯಾಗಿ ಮತ್ತೊಮ್ಮೆ ಅಕ್ರಂ ಪಾಷಾ ಅವರನ್ನು ನೇಮಕ ಮಾಡಿದೆ.

ಚುನಾವಣಾ ಸಮಯದಲ್ಲಿ ಹಾಸನ ಜಿಲ್ಲಾಧಿಕಾರಿಯಾಗಿದ್ದ ಅಕ್ರಂ ಪಾಷಾ ಅವರನ್ನು ವರ್ಗಾವಣೆಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ತಕ್ಷಣಕ್ಕೆ ಜಾರಿಗೆ‌ ಬರುವಂತೆ ಪಂಚಾಯತ್ ರಾಜ್ ಇಲಾಖೆ ಆಯುಕ್ತ ಸ್ಥಾನವನ್ನು ವಾಪಸ್ ಪಡೆದು ಮುಂದಿನ ಆದೇಶದವರೆಗೂ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಆದರೆ ಜಿಲ್ಲಾಧಿಕಾರಿ ಪ್ರಿಯಾಂ ಮೇರಿ ಫ್ರಾನ್ಸಿಸ್ ಅವರನ್ನು ಯಾವುದೇ ಜಾಗ ತೋರಿಸದೆ ವರ್ಗಾವಣೆ ಮಾಡಲಾಗಿದೆ.

ABOUT THE AUTHOR

...view details