ಕರ್ನಾಟಕ

karnataka

ETV Bharat / state

ಹಾಸನ ಜಿಲ್ಲೆಯಲ್ಲಿ 12 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ... - ಹಾಸನ ಕೊರೊನಾ ಸುದ್ದಿ

ಹಾಸನ ಜಿಲ್ಲೆಯಲ್ಲಿ ಇಂದು 332 ಜನ ಕೊರೊನಾ ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

sathish
ಡಾ.ಸತೀಶ್

By

Published : Sep 14, 2020, 5:43 PM IST

ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 220 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 12,220ಕ್ಕೆ ಏರಿಕೆಯಾಗಿದೆ. 2 ಸಾವಿನೊಂದಿಗೆ ಮೃತರ ಸಂಖ್ಯೆ 249 ತಲುಪಿದೆ ಎಂದು ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಇಂದು ಬಿಡುಗಡೆಯಾದ 332 ಜನರು ಸೇರಿ ಈವರೆಗೆ 9,062 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 2,909 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 53 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಆರೋಗ್ಯಾಧಿಕಾರಿ ಡಾ.ಸತೀಶ್
ಅಲ್ಲದೇ ಇಂದು ದಾಖಲಾಗಿರುವ ಕೊರೊನಾ ಪ್ರಕರಣದಲ್ಲಿ ಆಲೂರು-10, ಅರಕಲಗೂಡು-06, ಅರಸೀಕೆರೆ-23, ಬೇಲೂರು-13, ಚನ್ನರಾಯಪಟ್ಟಣ-30, ಹಾಸನ-119, ಹೊಳೆನರಸೀಪುರ-06, ಸಕಲೇಶಪುರ-13, ಇತರೆ- 00 ಒಟ್ಟು 220 ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಕೊರೋನಾ ಹಿನ್ನಲೆಯಲ್ಲಿ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತಾ, ನೆಗಡಿ, ಕೆಮ್ಮು ಏನಾದರೂ ಇದ್ದರೇ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಎಲ್ಲಾರು ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯ ತಾಲ್ಲೂಕುವಾರು ಕೋವಿಡ್ ಪ್ರಕರಣಗಳು:
1. ಆಲೂರು - 431.
2. ಅರಕಲಗೂಡು- 1143.
3. ಅರಸೀಕೆರೆ - 1564.
4. ಬೆಲೂರು - 895.
5. ಚನ್ನರಾಯಪಟ್ಟಣ 1592.
6. ಹಾಸನ 5196.
8. ಹೊಳೆನರಸೀಪುರ 918.
9. ಸಕಲೇಶಪುರ 405 ಇತರೆ 76 ಪ್ರಕರಣಗಳು ಈವರೆಗೆ ವರದಿಯಾಗಿದ್ದು, ಒಟ್ಟು 12220 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ತಿಳಿಸಿದ್ದಾರೆ.

ABOUT THE AUTHOR

...view details