ಹಾಸನ:ನಗರದಿಂದ 5 ಕಿ.ಮೀ. ದೂರದಲ್ಲಿರುವ ಹಾಲುವಾಗಿಲು ಕಟ್ಟೆ ತುಂಬಿ ಹರಿಯುತ್ತಿದ್ದು, ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಹಾಲುವಾಗಿಲು ಕಟ್ಟೆ - ಹಾಸನ ನ್ಯೂಸ್
ಹಾಸನ ನಗರಕ್ಕೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗಿರುವ ಹಾಲುವಾಗಿಲು ಕಟ್ಟೆ ತುಂಬಿ ಹರಿಯುತ್ತಿದ್ದು, ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಹಾಲುವಾಗಿಲು ಕಟ್ಟೆ
ಹೇಮಾವತಿ ನದಿಗೆ ಅಡ್ಡಲಾಗಿ ಈ ಕಟ್ಟೆಯನ್ನು ನಿರ್ಮಿಸಲಾಗಿದ್ದು, ಯಗಚಿ ಜಲಾಶಯದಿಂದ ನೀರು ಬಿಟ್ಟಾಗ ಕಟ್ಟೆ ಸಂಪೂರ್ಣವಾಗಿ ತುಂಬುತ್ತದೆ. ಹಾಸನ ನಗರಕ್ಕೆ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರು ರೂಪಿಸಿದ ಮಹತ್ತರ ಯೋಜನೆ ಇದಾಗಿದ್ದು, ಹತ್ತಾರು ವರ್ಷಗಳ ಹಿಂದೆ ಅಳವಡಿಸಿರುವ ಮೋಟಾರ್‌ಗಳು ಇಂದಿಗೂ ಕೆಲಸ ಮಾಡುತ್ತಿರುವುದು ವಿಶೇಷ.
ಇದು ಹಾಸನ ನಗರದಿಂದ ಕೇವಲ 5 ಕಿ.ಮೀ. ದೂರದಲ್ಲಿರುವುದರಿಂದ ಜಿಲ್ಲೆಯ ಜನರು ವಾರದ ರಜೆ ಬಂತೆಂದರೆ ಹಾಲುವಾಗಿಲು ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾರೆ.