ಕರ್ನಾಟಕ

karnataka

ETV Bharat / state

ಮತ ಚಲಾಯಿಸಿ ಮೈತ್ರಿ‌ ಅಭ್ಯರ್ಥಿ ಪ್ರಜ್ವಲ್​​​ ಗೆಲ್ಲುವರು ಎಂದ ದೊಡ್ಡಗೌಡ್ರು

ಇಂದು ಮೈತ್ರಿ ಅಭ್ಯರ್ಥಿಗೆ ನಾನು ಹಾಗೂ ಪತ್ನಿ ಬಂದು ಮತ ಚಲಾಯಿಸಿದ್ದೇವೆ. ನಾವು ನಮ್ಮ ಕೈಲಾದ ಸೇವೆ ಮಾಡಿದ್ದೇವೆ. ಕ್ಷೇತ್ರದಲ್ಲಿ ಯಾವುದೇ ಆತಂಕವಿಲ್ಲದೆ ಮೈತ್ರಿ‌ ಅಭ್ಯರ್ಥಿ ಗೆಲ್ಲುವರು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್​ಡಿಡಿ

By

Published : Apr 18, 2019, 1:24 PM IST

ಹಾಸನ/ಹೊಳೆನರಸೀಪುರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಹುಟ್ಟೂರಾದ ಪಡುವಲಹಿಪ್ಪೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1954ರಿಂದ ತಾಲೂಕು ಬೋರ್ಡ್ ಸದಸ್ಯನಾಗಿ ರಾಜಕೀಯ ಜೀವನ ಪ್ರಾರಂಭಿಸಿದ ನಾನು ಇಲ್ಲಿವರೆಗೂ ಜನಸೇವೆ ಮಾಡುತ್ತಿದ್ದೇನೆ. ನಾನು ಈ ತಾಲೂಕಿನಿಂದಲೇ ಬೆಳೆದಿದ್ದು. ಹಲವರು ನಮ್ಮದು ಕುಟುಂಬ ರಾಜಕೀಯ ಎಂದು ವ್ಯಾಖ್ಯಾನ ಮಾಡ್ತಾರೆ. ನಾವು ರೈತರ ಮಕ್ಕಳು. ದೈವದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ದೈವ ಕೃಪೆಯಿಂದ ಹಂತ ಹಂತವಾಗಿ ಬೆಳೆದಿದ್ದೇವೆ ಎಂದು ಹೇಳಿದರು.

ಇಂದು ಮೈತ್ರಿ ಅಭ್ಯರ್ಥಿಗೆ ನಾನು ಹಾಗೂ ಪತ್ನಿ ಬಂದು ಮತ ಚಲಾಯಿಸಿದ್ದೇವೆ. ನಾವು ನಮ್ಮ ಕೈಲಾದ ಸೇವೆ ಮಾಡಿದ್ದೇವೆ. ಕ್ಷೇತ್ರದಲ್ಲಿ ಯಾವುದೇ ಆತಂಕವಿಲ್ಲದೆ ಮೈತ್ರಿ‌ ಅಭ್ಯರ್ಥಿ ಗೆಲ್ಲುವರು. ಮಂಡ್ಯದಲ್ಲಿ ಶಾಸಕರು, ಸಚಿವರು ನಿಖಿಲ್ ನಿಲ್ಲಬೇಕು ಎಂದು ಒತ್ತಾಯ ಮಾಡಿದ್ದರು. ಹಾಗಾಗಿ ಅವರು ಸ್ಪರ್ಧೆ ಮಾಡಿದ್ದಾರೆ. ಅಲ್ಲಿಯೂ ಯಾವುದೇ ಆತಂಕ ಇಲ್ಲ. ಅವರೂ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆತಂಕವಿಲ್ಲದೆ ಮೈತ್ರಿ‌ ಅಭ್ಯರ್ಥಿ ಪ್ರಜ್ವಲ್​ ಗೆಲ್ಲುವರು ಎಂದ ಹೆಚ್​ಡಿಡಿ

ನಾಳೆ ರಾಹುಲ್ ಜೊತೆ ರಾಯಚೂರಿನಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗುವೆ. ಈಗ ನಡೆಯುತ್ತಿರೋ ಚುನಾವಣೆಯಲ್ಲಿ 14 ರಲ್ಲಿ 10 ಸ್ಥಾನ ಗೆಲ್ಲುತ್ತೇವೆ. ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ಚಿಕ್ಕಮಗಳೂರು ಸೇರಿ ವಿವಿಧೆಡೆ ಗೆಲುವು ನಿಶ್ಚಿತ. ನಾನು ಸಿದ್ದರಾಮಯ್ಯ ಒಟ್ಟಿಗೆ ಪ್ರಚಾರ ಮಾಡಿದ್ದೇವೆ. ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದರು.

ಮೋದಿ ದೊಡ್ಡ ಸ್ಥಾನದಲ್ಲಿ ಇರುವವರು ಲಘುವಾಗಿ ಮಾತನಾಡುವುದನ್ನ ಬಿಟ್ಟರೆ ಅವರಿಗೆ ಗೌರವ ಹೆಚ್ಚು ಎಂದು ಕಮಿಷನ್ ಸರ್ಕಾರ ಎಂದು ಟೀಕಿಸಿದ ಪ್ರಧಾನಿ ಮೋದಿಗೆ ಗೌಡರು ಟಾಂಗ್ ನೀಡಿದರು. ಮೋದಿಗೆ ಸ್ಪಷ್ಟ ಬಹುಮತ ಬರೋದಿಲ್ಲ. ನಮಗೇ ಬಹುಮತ ಸಿಗಬಹುದು. ಅತಂತ್ರ ಫಲಿತಾಂಶವೂ ಬರಬಹುದು. ಜಾತ್ಯಾತೀತ ಶಕ್ತಿಗಳು ಒಂದಾಗಿ ಸರ್ಕಾರ ರಚಿಸುತ್ತೇವೆ. ಒಂದು ವೇಳೆ ಮಹಾಘಟಬಂಧನ್ ಸರ್ಕಾರ ಮಾಡುವ ಸಂದರ್ಭ ಎದುರಾದರೆ ತಾನು ರಾಹುಲ್ ಗಾಂಧಿ ಬೆಂಬಲಿಸುವೆ ಎಂದರು.

ABOUT THE AUTHOR

...view details