ಕರ್ನಾಟಕ

karnataka

ETV Bharat / state

ಅರಸೀಕೆರೆ ದೊಡ್ಡ ಗಣಪನಿಗೆ ಕೊರೊನಾ ಅಡ್ಡಿ: ಸಂಕಷ್ಟದಲ್ಲಿ ಮೂರ್ತಿ ತಯಾರಕ ಕುಟುಂಬ - corona time

78 ವರ್ಷದ ಇತಿಹಾಸವುಳ್ಳ ಅರಸೀಕೆರೆ ಗಣಪತಿಗೆ ಈ ವರ್ಷ ಕೊರೊನಾ ಎಂಬ ಹೆಮ್ಮಾರಿ ಅಡ್ಡಿಯಾಗಿದ್ದು, ಇದರ ಜೊತೆಗೆ ಜಿಲ್ಲಾಡಳಿತ ವಿಧಿಸಿರುವ ನಿಯಮಗಳಿಂದಾಗಿ ಗಣಪತಿ ಪ್ರತಿಷ್ಠಾಪಿಸಲು ಗೊಂದಲ ಸೃಷ್ಟಿಯಾಗಿದೆ.

Ganapathi
ಗಣಪನಿಗೆ

By

Published : Aug 20, 2020, 3:28 PM IST

ಹಾಸನ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ಗಣಪತಿ ಪ್ರತಿಷ್ಠಾಪನೆ ಮಾಡುವ ಮೂಲಕ ರಾಜ್ಯದಲ್ಲಿಯೇ ಹೆಸರಾಗಿರುವ ಅರಸೀಕೆರೆಯ ಗಣಪತಿ ಮಹೋತ್ಸವ ಈ ಬಾರಿ ಕಳೆಗುಂದುವ ಸಾಧ್ಯತೆ ಇದೆ. ಆದರೆ, ಕೊರೊನಾ ಇರುವುದರಿಂದ ನಾವೆಲ್ಲರೂ ಸಹಕರಿಸಬೇಕು ಸಹಕರಿಸುತ್ತೇವೆ. ಆದರೆ, ಎತ್ತರದ ಗಣಪತಿ ಕೂರಿಸಬಾರದು ಎಂಬ ನಿಯಮ ಮಾತ್ರ ಬೇಸರದ ಸಂಗತಿ. ಇನ್ನು ಈ ಬಾರಿ ಗಣಪತಿ ತಯಾರಕರ ಸಂಕಷ್ಟಗಳೇನು...? ಪ್ರತಿಷ್ಠಾಪನೆ ಮಾಡಲು ಆಗಿರುವ ಅಡ್ಡಿ ಆತಂಕಗಳೇನು ಎನ್ನುವುದರ ಬಗ್ಗೆ ನಮ್ಮ ಪ್ರತಿನಿಧಿ ಮಾತುಕತೆ ನಡೆಸಿದ್ದಾರೆ.

ಸಂಕಷ್ಟದಲ್ಲಿ ಮೂರ್ತಿ ತಯಾರಕ ಕುಟುಂಬ

ಪ್ರತಿವರ್ಷ ಗಣಪತಿ ಹಬ್ಬದ ಮುನ್ನ ಬರುವ ಬಸವ ಜಯಂತಿಯೆಂದು ಅರಸೀಕೆರೆಯ ದೊಡ್ಡಕೆರೆಯಲ್ಲಿ ಗಂಗೆ ಪೂಜೆ ನೆರವೇರಿಸಿ ಗಣಪತಿ ತಯಾರಿಸಲು ಅಲ್ಲಿನ ಶಾಸಕರು, ಮತ್ತು ಅರಸೀಕೆರೆ ಗಣಪತಿ ಭಕ್ತ ಮಂಡಳಿಯ ಪದಾಧಿಕಾರಿಗಳು ಚಾಲನೆ ಕೊಡುತ್ತಾರೆ. 78 ವರ್ಷಗಳ ಇತಿಹಾಸವುಳ್ಳ ಗಣಪತಿಗೆ ಈ ಬಾರಿ ಕೊರೊನಾದಿಂದ ವಿಘ್ನ ಎದುರಾಗಿದೆ. ಕೇವಲ ಜನಸಾಮಾನ್ಯರಿಗೆ ಅಷ್ಟೇ ಅಲ್ಲ ಗುಡಿ ಕೈಗಾರಿಕೆಗಳ ಮೂಲಕ ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ನೆಲೆ ಇಲ್ಲದಂತೆ ಮಾಡುತ್ತಿದೆ ಕೋವಿಡ್-19 ಎಂಬ ಮಹಾಮಾರಿ.

ಭಾದ್ರಪದ ಮಾಸಕ್ಕೆ ಮಹಾಮಾರಿ ದೇಶವನ್ನೇ ಬಿಟ್ಟುಹೋಗಬಹುದು ಎಂಬ ನಿರೀಕ್ಷೆಯಲ್ಲಿ ಮೂರು ತಲೆಮಾರುಗಳಿಂದ ಗಣಪತಿ ತಯಾರು ಮಾಡಿಕೊಂಡು ಬರುವ ಮೂಲಕ ಜೀವನ ಸಾಗಿಸುತ್ತಿದ್ದ ಈ ಕುಟುಂಬದ ಬದುಕಿನ ಮೇಲೆ ಹೊಡೆತ ಬಿದ್ದಿದೆ. ಲಕ್ಷಾಂತರ ರೂ. ಸಾಲ ಮಾಡಿ ಸಾವಿರಾರು ಗಣಪತಿ ಮತ್ತು ಗೌರಿ ಮೂರ್ತಿಗಳನ್ನು ತಯಾರು ಮಾಡಿದ್ದಾರೆ. ಆದರೆ, ಈ ಬಾರಿ ಗಣಪತಿ ಕೊಳ್ಳುವುದಿರಲಿ, ವಿಭಿನ್ನ ರೀತಿಯ, ವಿಶಿಷ್ಟ ರೀತಿಯ ಗಣಪತಿ ತಯಾರು ಮಾಡುವ ಸಂದರ್ಭದಲ್ಲಿ ನೋಡುವುದಕ್ಕೂ ಮಕ್ಕಳು ಬರುತ್ತಿಲ್ಲ ಎನ್ನುವುದು ಮೂರ್ತಿ ತಯಾರಕರಾದ ಗಣಪತಿ ಮಹದೇವ ಅವರ ಮಾತು.

ಇನ್ನು ಈಗಾಗಲೇ ನಾವು 10 ಅಡಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಆದರೆ, ಜಿಲ್ಲಾಡಳಿತ ಮತ್ತು ಸರ್ಕಾರ, ನಮ್ಮ ಧಾರ್ಮಿಕ ಭಾವನೆಗಳಿಗೆ ಎಲ್ಲೋ ಒಂದು ಕಡೆ ನಿಯಮಗಳನ್ನು ರೂಪಿಸಿ ಧಕ್ಕೆ ತರುವಂತಹ ಕೆಲಸ ಮಾಡಿದೆ. ಗಣಪತಿಯನ್ನು ಪ್ರತಿಷ್ಠಾಪನೆ ಮಾಡಬಾರದು ಎಂಬ ನಿಯಮಕ್ಕೆ ನಾವು ಸಹಕರಿಸುತ್ತೇವೆ. ಆದರೆ, ನಾಲ್ಕು ಅಡಿಗೂ ಎತ್ತರದ ಗಣಪತಿಯನ್ನು ಕೂರಿಸಬಾರದು ಎಂಬ ನಿಯಮವನ್ನು ಹಾಕಿರುವುದು ಬೇಸರದ ಸಂಗತಿ. ನಮ್ಮ ತಾಲೂಕಿನ ಗಣಪತಿ ಭಕ್ತರ ಭಾವನೆಗೆ ತಣ್ಣೀರೆರಚಿದೆ. ಹೀಗಾಗಿ ನಾವು ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ವಿಚಾರವನ್ನು ತಂದಿದ್ದೇವೆ. ಇಂದು ಸಭೆ ನಡೆದ ಬಳಿಕ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎನ್ನುತ್ತಾರೆ ಅರಸೀಕೆರೆಯ ಗಣಪತಿ ಭಕ್ತ ಮಂಡಳಿಯ ಮೋಹನ್.

ABOUT THE AUTHOR

...view details