ಹಾಸನ :ಮುದುಡಿ ಗ್ರಾಮದ ಶ್ರೀಕ್ಷೇತ್ರ ಗಂಗೆ ಮಡುವಿನಲ್ಲಿ ಕನಕ ಗುರು ಪೀಠದ ಶಾಲಾ ಕಟ್ಟಡ ಹಾಗೂ ಶ್ರೀ ಮಠದ ಶಂಕು ಸ್ಥಾಪನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು.
ಕನಕ ಗುರು ಪೀಠದ ಶಾಲಾ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಸಿದ್ದರಾಮಯ್ಯ - ಮುದುಡಿ ಗ್ರಾಮದ ಶ್ರೀಕ್ಷೇತ್ರ
ಮುದುಡಿ ಗ್ರಾಮದ ಶ್ರೀಕ್ಷೇತ್ರ ಗಂಗೆ ಮಡುವಿನಲ್ಲಿ ಕನಕ ಗುರು ಪೀಠದ ಶಾಲಾ ಕಟ್ಟಡ ಹಾಗೂ ಶ್ರೀ ಮಠದ ಶಂಕು ಸ್ಥಾಪನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು.
ಕನಕ ಗುರು ಪೀಠದ ಶಾಲಾ ಕಟ್ಟಡ ಹಾಗೂ ಶ್ರೀ ಮಠದ ಶಂಕುಸ್ಥಾಪನೆ ನೆರವೇರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಗಂಗೆ ಮಡುವಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಗಿನೆಲೆ ಮೈಸೂರು ವಿಭಾಗದ ಕನಕ ಗುರು ಪೀಠದ ಪರಮ ಪೂಜ್ಯ ಶ್ರೀ ಶಿವಾನಂದಪುರಿ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಪಟೇಲ್ ಶಿವಪ್ಪ ಹಾಗೂ ಜೆಡಿಎಸ್‌ನ ಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡ, ಚನ್ನರಾಯಪಟ್ಟಣ ಕ್ಷೇತ್ರದ ಸಿ. ಎನ್ ಬಾಲಕೃಷ್ಣ, ಶಂಕುಸ್ಥಾಪನೆಗೆ ಚಾಲನೆ ನೀಡಿದರು.
ನಂತರ ಶ್ರೀ ಗಂಗಾಧರೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಮಾಜಿ ಸಿಎಂ, ಗಂಗಾಧರೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.