ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಸವಾಲುಗಳ 1 ವರ್ಷ, ಪರಿಹಾರದ ಸ್ಪರ್ಶ ಕಾರ್ಯಕ್ರಮ - Special Issue Released

ಸವಾಲುಗಳ 1 ವರ್ಷ, ಪರಿಹಾರದ ಸ್ಪರ್ಶ ಎಂಬ ಈಗಿನ ಸರ್ಕಾರದ 1 ವರ್ಷದ ಪ್ರಗತಿ ವರದಿ, ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಬಿಡುಗಡೆ ಮಾಡಿದರು.

Hassan
ಸವಾಲುಗಳ 1 ವರ್ಷ,ಪರಿಹಾರದ ಸ್ಪರ್ಶ ವಿಶೇಷ ಸಂಚಿಕೆ ಬಿಡುಗಡೆ

By

Published : Jul 28, 2020, 9:36 AM IST

ಹಾಸನ: ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಾಸನದ ನಗರಸಭೆ ಸಭಾಂಗಣದಲ್ಲಿ ಜಿಲ್ಲೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಸಹಕಾರದೊಂದಿಗೆ ವಿನೂತನ ರೀತಿಯಲ್ಲಿ ಸಮಾರಂಭ ನಡೆಯಿತು.

ಸವಾಲುಗಳ 1 ವರ್ಷ, ಪರಿಹಾರದ ಸ್ಪರ್ಶ, ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆ ಬಿಡುಗಡೆ

ರಾಜ್ಯಾದಾದ್ಯಂತ ಏಕಕಾಲದಲ್ಲಿ ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪಾಲ್ಗೊಂಡು ಸವಾಲುಗಳ 1 ವರ್ಷ, ಪರಿಹಾರದ ಸ್ಪರ್ಶ ಎಂಬ ಈಗಿನ ಸರ್ಕಾರದ 1 ವರ್ಷದ ಪ್ರಗತಿ ವರದಿ, ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆಗಳನ್ನು ಬಿಡುಗಡೆ ಮಾಡಿದರು.

ಸವಾಲುಗಳ 1 ವರ್ಷ, ಪರಿಹಾರದ ಸ್ಪರ್ಶ, ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆ ಬಿಡುಗಡೆ

ಪ್ರಾತಿನಿಧಿಕವಾಗಿ ಜಿಲ್ಲೆಯ ಮಡಿವಾಳ ಸಮುದಾಯಕ್ಕೆ ಸೇರಿದ ಪುಷ್ಪ ಎಂಬುವರು ಮುಖ್ಯಮಂತ್ರಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಕೊರೊನಾ ಸೋಂಕಿನ ಸಂದರ್ಭದಲ್ಲಿ ಇಡೀ ದೇಶವೇ ಸಂಕಷ್ಟದಲ್ಲಿದ್ದಾಗ ಸಣ್ಣ-ಸಣ್ಣ ಸಮುದಾಯಗಳನ್ನು ಗುರುತಿಸಿ ಮನವಿಗೂ ಮುನ್ನವೇ ಪ್ರತಿ ಕುಟುಂಬಗಳಿಗೂ ತಲಾ 5,000 ರೂ.ಗಳಂತೆ ಸಹಾಯಧನ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಇದರಿಂದ ಸಂಕಷ್ಟದ ಅವಧಿಯಲ್ಲಿ ತಮ್ಮ ಕುಟುಂಬ ನಿರ್ವಹಣೆಗೆ ತುಂಬಾ ಸಹಕಾರಿಯಾಗಿದೆ ಎಂದರು.

ಮುಂದಿನ ದಿನಗಳಲ್ಲೂ ಎಲ್ಲಾ ಸಮುದಾಯದವರಿಗೂ ಸರ್ಕಾರದ ಸಹಾಯಹಸ್ತ ದೊರೆಯುವಂತಾಗಲಿ. ಜನಪರ ಯೋಜನೆಗಳನ್ನು ರೂಪಿಸಿದ ಸರ್ಕಾರಕ್ಕೆ ಅಭಿನಂದನೆ. ಮಡಿವಾಳ ಸಮಾಜದವರು ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಪ್ರತಿ ಕುಟುಂಬಕ್ಕೆ ಇನ್ನೊಮ್ಮೆ 10 ಸಾವಿರ ರೂ. ಪರಿಹಾರ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಕೊರೊನಾ ಜೊತೆ ನಾವು ಬದುಕುವುದನ್ನು ಕಲಿಯಬೇಕಾಗಿದೆ. ಇನ್ನೂ ಹೆಚ್ಚಿನ ಸವಲತ್ತುಗಳನ್ನು ನಮ್ಮ ಸರ್ಕಾರದ ಹಣಕಾಸು ಸ್ಥಿತಿಗತಿ ನೋಡಿಕೊಂಡು ಮಾಡುತ್ತೇನೆ. ಈಗ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದ್ದರಿಂದ ಎಲ್ಲರೂ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.

ABOUT THE AUTHOR

...view details