ಕರ್ನಾಟಕ

karnataka

ETV Bharat / state

ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನ ವಿರೋಧಿ ನೀತಿಯಾಗಿದೆ: ಎಸ್​ಎಫ್​ಐ ಆರೋಪ - ಸಿಎಎ ವಿರೋಧಿಸಿ ಹಾಸನದಲ್ಲಿ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ವಿರೋಧಿಸಿ ಪ್ರತಿಭಟಿಸುತ್ತಿದ್ದ ದೆಹಲಿ ವಿವಿ ವಿದ್ಯಾರ್ಥಿಗಳ ಮೇಲಿನ ಪ್ರತಿಭಟನೆ ಖಂಡಿಸಿ ಎಸ್​ಎಫ್​ಐ ಮತ್ತು ಡಿವೈಎಫ್‌ಐ ನೇತೃತ್ವದಲ್ಲಿ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ.

FFI And DYFI Protest Against To CAA In  Hassan
ಪೌರತ್ವ ತಿದ್ದುಪಡಿ ಕಾಯ್ದೆ ಇದೊಂದು ಸಂವಿಧಾನ ವಿರೋದಿ ನೀತಿಯಾಗಿದೆ : ಎಸ್​ಎಫ್​ಐ ಆರೋಪ

By

Published : Dec 18, 2019, 11:02 PM IST

ಹಾಸನ: ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ವಿರೋಧಿಸಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ವೇಳೆ ಅಲ್ಲಿನ ಪೊಲೀಸ್ ಮತ್ತು ಸಿಆರ್‌ಪಿ ಪಡೆಗಳು ಪ್ರತಿಭಟನಗಾರರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಎಸ್​ಎಫ್​ಐ ಮತ್ತು ಡಿವೈಎಫ್‌ಐ ನೇತೃತ್ವದಲ್ಲಿ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.

ಪೌರತ್ವ ತಿದ್ದುಪಡಿ ಕಾಯ್ದೆ ಇದೊಂದು ಸಂವಿಧಾನ ವಿರೋದಿ ನೀತಿಯಾಗಿದೆ: ಎಸ್​ಎಫ್​ಐ ಆರೋಪ

ಭಾರತ ಸಂವಿಧಾನದಲ್ಲಿ ಜಾತ್ಯಾತೀತ ಅಂಶಗಳಿಗೆ ಅಡ್ಡಿಪಡಿಸುವ ರೀತಿ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವುದನ್ನು ವಿರೋಧಿಸಿದರು. ಇದು ದೇಶದ ಸಂವಿಧಾನದ ವಿರುದ್ಧವಾಗಿ ನಡೆಯುತ್ತಿರುವ ಪ್ರಕ್ರಿಯೆವಾಗಿದೆ. ಅಮಿತ್ ಶಾ ಮತ್ತು ಮೋದಿ ಸರ್ಕಾರ ಅತ್ಯಂತ ಜನ ವಿರೋಧಿ, ಕಾನೂನು ತರಲು ಹೊರಟಿದೆ, ದೆಹಲಿಯಲ್ಲಿ ಮಸೂದೆ ಖಂಡಿಸಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದರು.

ಈ ಮಸೂದೆಯನ್ನು ಲೋಕಸಭೆ ಭಾರಿ ಬಹುಮತದಿಂದ ಹಾಗೂ ರಾಜ್ಯ ಸಭೆಯಲ್ಲಿಯೂ ಕೂಡ ಮಂಜೂರು ಮಾಡಿವೆ. ಆದರೆ, ಇದರ ವಿರುದ್ಧ ತೀವ್ರ ಅತೃಪ್ತಿ ಹೊಗೆಯಾಡುತ್ತಿದೆ. ಈ ಮಸೂದೆಯನ್ನು ಲೋಕಸಭೆ, ರಾಜ್ಯ ಸಭೆಯಲ್ಲಿ ಮಂಜೂರು ಮಾಡುತ್ತಿರುವಾಗ, ಈಶಾನ್ಯ ಭಾರತದ ವಿದ್ಯಾರ್ಥಿಗಳು 11 ಗಂಟೆಗಳ ಬಂದ್ ಆಚರಿಸುತ್ತಿದ್ದರು.

ಭಾರತದ ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ದೇಶಾದ್ಯಂತ ಜಾರಿಗೊಳಿಸವ ಮೂಲಕ ದಾಖಲೆಗಳನ್ನು ಒದಗಿಸಲಾಗದ ಭಾರತೀಯ ಅಲ್ಪಸಂಖ್ಯಾರನ್ನು ಅಕ್ರಮ ವಲಸಿಗರೆಂದು ಘೋಷಿಸಿ, ಅವರ ಪೌರತ್ವವನ್ನು ರದ್ದುಗೊಳಿಸುವ ಮತ್ತು ಅವರನ್ನು ವಲಸಿಗರು ಕ್ಯಾಂಪ್​ಗಳಿಗೆ ತಳ್ಳುವ ಹುನ್ನಾರವಿದೆ ಎಂದು ಕಿಡಿಕರಿದರು.

ABOUT THE AUTHOR

...view details