ಹಾಸನ:ಹೆತ್ತಪ್ಪನೇ ತನ್ನ ಮಗಳ ಮೇಲೆ ಕಳೆದ ಮೂರು ವರ್ಷಗಳಿಂದ ನಿರಂತರ ಅತ್ಯಾಚಾರವೆಸುಗುತ್ತಿದ್ದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಕಲೇಶಪುರ ತಾಲೂಕಿನಲ್ಲಿ ಇಂತಹುದೊಂದು ಅಮಾನವೀಯ ಘಟನೆ ನಡೆದಿದೆ. ಸದ್ಯ ಬಾಲಕಿಯನ್ನ ಮಾರ್ಗಾ ಮಹಿಳಾ ಸಂಘಟನೆಯ ಕಲ್ಪನಾಕೀರ್ತಿ ನೇತೃತ್ವದಲ್ಲಿ ರಕ್ಷಿಸಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಮೂರು ವರ್ಷಗಳಿಂತ ಸ್ವತಃ ಮಗಳ ಮೇಲೆ ಹೆತ್ತಪ್ಪನೇ ಅತ್ಯಾಚಾರವೆಸಗಿದ್ದಾನೆ. ರಾತ್ರಿ ಎಲ್ಲರೂ ಮಲಗಿದ ನಂತ್ರ ಆಕೆಯ ಬಾಯಿಗೆ ಬಟ್ಟೆಯನ್ನ ತುರುಕಿ ಅತ್ಯಾಚಾರವೆಸಗುತ್ತಿದ್ದನಂತೆ. ಈ ವಿಚಾರವನ್ನ ಅಮ್ಮನಿಗಾಗಲೀ, ತಮ್ಮನಿಗಾಗಲೀ ಹೇಳಿದ್ರೆ, ಮನೆಯಿಂದ ಓಡಿಸುವುದಾಗಿ ಹೇಳಿದ್ದಷ್ಟೆಯಲ್ಲದೇ ಕೊಲೆ ಮಾಡುವುದಾಗಿಯೂ ಬೆದರಿಕೆ ಒಡ್ಡಿದ್ದರಿಂದ ಆ ಬಾಲಕಿ ಎಲ್ಲವೂನ್ನೂ ಮುಚ್ಚಿಟ್ಟಿದ್ದಳಂತೆ. ಇಂದು ಹೆಚ್ಚು ರಕ್ತಸ್ರಾವವಾದ ಹಿನ್ನಲೆಯಲ್ಲಿ ತಾಯಿ ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಇನ್ನು, ವಿಚಾರವನ್ನ ತಿಳಿದ ಮಾರ್ಗಾ ಮಹಿಳಾ ಸಂಘಟನೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ತಂದೆಯನ್ನ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಬಾಲಕಿಯನ್ನ ಚಿಕಿತ್ಸೆಗೊಳಪಡಿಸಲಾಗಿದೆ. ಈ ಸಂಬಂಧ ಸಕಲೇಶಪುರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.