ಸಕಲೇಶಪುರ: ತಾಲೂಕಿನ ಇಬ್ಬಡಿ ಸುತ್ತಮುತ್ತ 18 ಕಾಡಾನೆಗಳ ಹಿಂಡು ಅಡ್ಡಾಡುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.
ಸಕಲೇಶಪುರದ ಇಬ್ಬಡಿಯಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ - coffe estate
ಸಕಲೇಶಪುರದ ಇಬ್ಬಡಿಯ ಸುತ್ತಮುತ್ತ ಇಂದು ಬೆಳಗ್ಗೆ ಕಾಫಿ ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕರು ಕಾಡಾನೆಗಳ ಹಿಂಡನ್ನು ಕಂಡು ಭಯಭೀತರಾಗಿದ್ದಾರೆ.
ಸಕಲೇಶಪುರದ ಇಬ್ಬಡಿಯಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷ
ಇಂದು ಬೆಳಗ್ಗೆ ಕಾಫಿ ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕರು ಕಾಡಾನೆಗಳ ಹಿಂಡನ್ನು ಕಂಡು ಭಯಭೀತರಾಗಿದ್ದಾರೆ. ಕಾಡಾನೆಗಳ ಗುಂಪಿನಲ್ಲಿ ನಾಲ್ಕು ಮರಿಯಾನೆಗಳು ಕೂಡಾ ಇವೆ. ಕೆಲವರು ಇವುಗಳ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ತಕ್ಷಣವೇ ಆನೆಗಳನ್ನು ಬೇರೆಡೆ ಅಟ್ಟುವಂತೆ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.