ಹಾಸನ :ಕಾಡಾನೆಯನ್ನು ಕೊಂದು ಬಳಿಕ ದಂತವನ್ನು ಬೇರ್ಪಡಿಸಿ, ಮಾರಾಟ ಮಾಡಲು ಯತ್ನಿಸಿದ ಐವರನ್ನು ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.
ಹಾಸನದ ವೀರಾಪುರದ ಚಂದ್ರೇಗೌಡ(48) ನಾಗರಾಜ್(42) ತಿಲಕ್ (39), ತಮ್ಮಯ್ಯ ಹಾಗೂ ಪಾಪಯ್ಯ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮದ 8ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ.
ಕೃಷಿಗೆ ಕಾಡಾನೆಗಳ ಉಪಟಳ ತಪ್ಪಿಸಲು ಆರೋಪಿಗಳು ಆನೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಅದರಂತೆ ವಿದ್ಯುತ್ ತಂತಿಯಿಂದ ಜಮೀನಿಗೆ ಬೇಲಿ ಮಾಡಿದ್ದರು. ವಿದ್ಯತ್ ತಂತಿಗೆ ಆನೆ ತಗುಲಿ ಮೃತ ಪಟ್ಟಿತ್ತು. ಆರೋಪಿಗಳು ಆನೆಯ ದಂತವನ್ನು ಬೇರ್ಪಡಿಸಿ ರಾತ್ರೋರಾತ್ರಿ ಜಮೀನಿನಲ್ಲಿ ಹೂತು ಹಾಕಿದ್ದರು.