ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಮತದಾನ: ದೇವಾಲದಕೆರೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ - ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ

ಹೊಳೆನರಸೀಪುರ, ಚನ್ನರಾಯಪಟ್ಟಣ, ಸಕಲೇಶಪುರ ಹಾಗೂ ಹಾಸನ ತಾಲೂಕಿನ 125 ಗ್ರಾಮ ಪಂಚಾಯಿತಿಗಳಿಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

election-boycott-by-devaladekere-villagers
ಹಾಸನದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಮತದಾನ: ದೇವಾಲದಕೆರೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

By

Published : Dec 22, 2020, 5:18 PM IST

ಹಾಸನ: ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಇಂದು ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಜಿಲ್ಲೆಯಲ್ಲಿ ಮತದಾನ ಮಂದಗತಿಯಲ್ಲಿ ಸಾಗುತ್ತಿದೆ.

ಹಾಸನದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಮತದಾನ: ದೇವಾಲದಕೆರೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

ಜಿಲ್ಲೆಯ ಹೊಳೆನರಸೀಪುರ, ಚನ್ನರಾಯಪಟ್ಟಣ, ಸಕಲೇಶಪುರ ಹಾಗೂ ಹಾಸನ ತಾಲೂಕಿನ 125 ಗ್ರಾಮ ಪಂಚಾಯಿತಿಗಳಿಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಶ್ರವಣ ಬೆಳಗೊಳದ ಶಾಸಕ ಸಿ.ಎನ್.ಬಾಲಕೃಷ್ಣ ಸ್ವಗ್ರಾಮ ಚೋಳೇನಹಳ್ಳಿಯಲ್ಲಿರುವ ಮತಗಟ್ಟೆಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಬಂದು ಹಕ್ಕು ಚಲಾಯಿಸಿದರು.

ಇನ್ನು, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ ಗ್ರಾಮ ಪಂಚಾಯಿತಿ ಮತದಾನದಿಂದ ವಂಚಿತರಾಗಿದ್ದಾರೆ. ಸ್ವಗ್ರಾಮ ಗಂಜಿಗೆರೆಯಿಂದ ಮತದಾನ ಮಾಡುವ ಹಕ್ಕನ್ನು ಹಾಸನಕ್ಕೆ ಬದಲಾವಣೆ ಮಾಡಿಕೊಂಡ ಹಿನ್ನೆಲೆ, ಗ್ರಾಮ ಪಂಚಾಯಿತಿ ಚುನಾವಣೆಗೆ ಮತ ಹಾಕುವ ಹಕ್ಕು ಕಳೆದು ಕೊಂಡಿದ್ದಾರೆ.

ಮತದಾನ ಬಹಿಷ್ಕಾರ: ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮಸ್ಥರು ಇಂದು ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಚುನಾವಣೆಯನ್ನ ಬಹಿಷ್ಕರಿಸಿದ್ದಾರೆ. ಕಸ್ತೂರಿ ರಂಗನ್ ವರದಿಗೆ ನಮ್ಮ ವಿರೋಧವಿದೆ. ಈ ಕಾರಣದಿಂದ ಚುನಾವಣೆಗೆ ಸ್ಪರ್ಧಿಸಿದ್ದವರೆಲ್ಲ ಈಗಾಗಲೇ ನಾಮಪತ್ರ ವಾಪಸ್ ಪಡೆದಿದ್ದೇವೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ABOUT THE AUTHOR

...view details