ಚನ್ನರಾಯಪಟ್ಟಣ(ಹಾಸನ): ಗರ್ಭದಲ್ಲೇ ಹಲವು ನ್ಯೂನತೆ ಹೊಂದಿದ್ದ ಕರುವನ್ನು ಸತತ 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆಯುವಲ್ಲಿ ಪಶು ವೈದ್ಯರು ಯಶಸ್ವಿಯಾಗಿದ್ದಾರೆ.
ಸಾವು - ಬದುಕಿನ ಮಧ್ಯೆ ಹೋರಾಡುತ್ತಿದ್ದ ಹಸುವಿಗೆ ಸತತ 3 ಗಂಟೆ ಶಸ್ತ್ರ ಚಿಕಿತ್ಸೆ - ಹಸುವಿಗೆ ಸಿಜೇರಿಯನ್
ಗರ್ಭ ಧರಿಸಿ ಕರುಹಾಕುವ ವೇಳೆ ಸಾವು - ಬದುಕಿನ ಮಧ್ಯ ಹೋರಾಡುತ್ತಿದ್ದ ಹಸುವನ್ನು ಪಶು ವೈದ್ಯರು ರಕ್ಷಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಹಸುವಿಗೆ ಶಸ್ತ್ರ ಚಿಕಿತ್ಸೆ
ಕಾಚೇನಹಳ್ಳಿ ಗ್ರಾಮದ ಮಂಜುಳಮ್ಮ ಎಂಬುವರು ಸಾಕಿದ್ದ ಆರು ವರ್ಷದ ಹಸು ಗರ್ಭ ಧರಿಸಿದ್ದು, ಕರು ಹಾಕುವ ವೇಳೆ ಸಾವು-ಬದುಕಿನೊಂದಿಗೆ ಹೋರಾಡುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕುಂಭೇನಹಳ್ಳಿ ಪಶು ಚಿಕಿತ್ಸಾಲಯದ ವೈದ್ಯ ಡಾ.ಎಂ.ಆರ್.ಪ್ರವೀಣ್‌ಕುಮಾರ್, ಅಣತಿಯ ಪಶು ವೈದ್ಯಾಧಿಕಾರಿ ಡಾ.ಎಸ್.ಪಿ.ಮಂಜುನಾಥ್ ಮತ್ತು ಸಾತೇನಹಳ್ಳಿಯ ಡಾ.ಜೆ.ಕೆ.ಪ್ರಮೊದ್ ಹಸುವಿನ ಹೊಟ್ಟೆಯಲ್ಲಿ ಅಡ್ಡ ಸಿಲುಕಿದ್ದ ಕರುವನ್ನು ಹೊರತೆಗೆಯುವಲ್ಲಿ ಸಫಲರಾಗಿದ್ದಾರೆ.
ಆದರೆ, ಕರು ಹಸುವಿನ ಹೊಟ್ಟೆಯೊಳಗಡೆಯೇ ಸಾವನ್ನಪ್ಪಿತ್ತು.