ಹಾಸನ: ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡಿದೆ. ಕೆಲ ರಾಷ್ಟ್ರೀಯ ಪಕ್ಷಗಳು ತುಳಿಯಲು ಹುನ್ನಾರ ಮಾಡುತ್ತಿವೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಆರೋಪಿಸಿದರು.
ಡಿಕೆಶಿ ಅಕ್ರಮವಾಗಿ ಆಸ್ತಿ ಮಾಡಿಲ್ಲ.. ಮಾಜಿ ಸಚಿವ ಹೆಚ್ ಡಿ ರೇವಣ್ಣ - ಎಚ್.ಡಿ.ರೇವಣ್ಣ
ಡಿಕೆಶಿ ಅಕ್ರಮವಾಗಿ ಆಸ್ತಿ ಮಾಡಿಲ್ಲ. ನಾವು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇವೆ. ಅದನ್ನು ತಮಟೆ ಬಾರಿಸಿ ಹೇಳಬೇಕಾಗಿಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರಾಷ್ಟ್ರೀಯ ಪಕ್ಷಗಳು ಸಹ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ. ಕೆಲ ನಾಯಕರು ಪಕ್ಷದ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು, ಅಪಪ್ರಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು. ಇಂತಹ ಸನ್ನಿವೇಶದ ಆರೋಪಗಳನ್ನು ದೇವೇಗೌಡರು ಹಲವು ವರ್ಷಗಳಿಂದ ನೋಡುತ್ತಿದ್ದಾರೆ. ಅದಕ್ಕೆ ತಕ್ಕ ಉತ್ತರವನ್ನು ನೀಡಿದ್ದಾರೆ ಎಂದರು.
ರಾಜ್ಯ ಸರ್ಕಾರ ಯಾವುದೇ ಆದೇಶ ಮಾಡಿದರೂ ನನಗೊಂದು ಪ್ರತಿ ತಲುಪಲಿದೆ. ಯಾವುದೇ ತನಿಖೆಗೂ ಹೆದರಲ್ಲ. ಆ ರೀತಿ ಕಡತಗಳಿಗೆ ಮುದ್ರೆ ಹೊಡೆದಿರುತ್ತೇನೆ. ರಾಜ್ಯದಲ್ಲಿ ಜೆಡಿಎಸ್ ಬರದಿದ್ದರೆ ರೈತರ 48 ಸಾವಿರ ಕೋಟಿ ಸಾಲಮನ್ನಾ ಆಗುತ್ತಿರಲಿಲ್ಲ. ತೆಂಗು ಬೆಳೆಗಾರರಿಗೆ ಪರಿಹಾರ, ಗೃಹ ಲಕ್ಷ್ಮಿ ಯೋಜನೆ, 1000 ಇಂಗ್ಲೀಷ್ ಶಾಲೆಯಂತಹ ಯೋಜನೆ ರೂಪಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.ಡಿಕೆಶಿ ಅಕ್ರಮವಾಗಿ ಆಸ್ತಿ ಮಾಡಿಲ್ಲ, ನಾವು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದೇವೆ. ಅದನ್ನು ತಮಟೆ ಬಾರಿಸಿ ಹೇಳಬೇಕಾಗಿಲ್ಲ. ಡಿಕೆಶಿ ಅವರು ಕಷ್ಟದಲ್ಲಿರುವುದು ಬೇಸರ ತಂದಿದೆ ಎಂದರು.