ಕರ್ನಾಟಕ

karnataka

By

Published : Jul 6, 2020, 7:52 PM IST

ETV Bharat / state

ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ

ಅರಕಲಗೂಡು ತಾಲೂಕಿನ ಕೇರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ, ಡಾ.ಬಿ.ಆರ್.ಪುತ್ಥಳಿ ನಿರ್ವಹಣಾ ಸಮಿತಿ ಸ್ಥಾಪಿಸಿರುವ ಡಾ.ಬಿ.ಆರ್.ಅಂಬೇಡ್ಕರ್​​ ಪುತ್ಥಳಿಯನ್ನು ಜಿಲ್ಲಾ ಪಂಚಾಯತ್ ಸದಸ್ಯ ಡಾ. ಮಂತರ್ ಗೌಡ ಅನಾವರಣಗೊಳಿಸಿದರು.

Arakalgodu
ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ

ಅರಕಲಗೂಡು :ಡಾ.ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ದಲಿತರು ಶಿಕ್ಷಣವಂತರಾಗಿ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಬದುಕಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಡಾ. ಮಂತರ್ ಗೌಡ ಕರೆ ನೀಡಿದರು.

ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ..

ತಾಲೂಕಿನ ಕೇರಳಾಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಯುವಕ ಸಂಘ, ಡಾ. ಬಿ ಆರ್ ಪುತ್ಥಳಿ ನಿರ್ವಹಣಾ ಸಮಿತಿ ಸ್ಥಾಪಿಸಿರುವ ಡಾ. ಬಿ ಆರ್ ಅಂಬೇಡ್ಕರ್​​ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು, ದಲಿತರ ಅಭ್ಯುದಯಕ್ಕೆ ಶಿಕ್ಷಣವೇ ಪ್ರಬಲ ಅಸ್ತ್ರ. ಆದ್ದರಿಂದ ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆಯುವ ಕಡೆ ಗಮನ ಹರಿಸಬೇಕು. ಅದೇ ರೀತಿ ದಲಿತರೆಲ್ಲ ಒಗ್ಗೂಡುವ ಮೂಲಕ ಮಾದರಿ ಬದುಕು ನಡೆಸಬೇಕು ಎಂದರು.

ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ

ಜಿಲ್ಲಾ ಪಂಚಾಯತ್‌ ಸದಸ್ಯ ರವಿ, ಶ್ರೀ ಸಂಪತ್ ಸುಬ್ಬಯ್ಯ, ದ್ರಾವಿಡ ಆರ್ಮಿ ಸಂಸ್ಥಾಪಕ ರಾಜ್ಯಾಧ್ಯಕ್ಷರು, ವಿಷ್ಣು ಪ್ರಕಾಶ್ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷರು, ಸಾಮಾಜಿಕ ರಾಜಕೀಯ ಸಮಾನತೆ ಭಾಷಣಕಾರರು ಮತ್ತು ಡಾ ಬಿ ಆರ್ ಅಂಬೇಡ್ಕರ್ ಯುವಕರ ಸಂಘ ಪದಾಧಿಕಾರಿಗಳು ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.

ABOUT THE AUTHOR

...view details